×
Ad

ಮಂಗಳೂರು ರೈಲ್ವೆ ವಿಭಾಗ ಕಷ್ಟ , ರೆನಲ್‌ಗೆ ಪ್ರಯತ್ನ:ನಳಿನ್‌ಕುಮಾರ್ ಕಟೀಲ್

Update: 2016-02-28 20:10 IST

ಮಂಗಳೂರು,ಫೆ.28: ಕರಾವಳಿ ಜನರ ಬಹುದಿನದ ಬೇಡಿಕೆಯಾಗಿರುವ ಮಂಗಳೂರು ರೈಲ್ವೆ ವಿಭಾಗ ಮಾಡುವುದು ಕಷ್ಟ. ಆದರೆ ಅದರ ಬದಲಿಗೆ ಮಂಗಳೂರು ರೆನಲ್ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

 ಪಿಲಿಕುಳದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳೂರು, ಮೈಸೂರು, ಹಾಸನ, ಹುಬ್ಬಳ್ಳಿ ರೈಲ್ವೆಗಳನ್ನು ಸೇರಿಸಿ ಮಂಗಳೂರು ರೆನಲ್ ಮಾಡಲು ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದರು.

  ಮಂಗಳೂರು ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆ ರೈಲ್ವೆ ನಿಲ್ದಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ತಾಂತ್ರಿಕ ಸಮ್ಮತಿ ಸಿಕ್ಕಿದ್ದು ಇಲಾಖೆ ಮತ್ತು ಮಹಾನಗರಪಾಲಿಕೆಯ ಮೂಲಕ ಜಾಗವನ್ನು ಗುರುತಿಸಿ ಸರ್ವೆಯನ್ನು ನಡೆಸಲಾಗಿದೆ . ಮಂಗಳೂರು ವಿಶ್ವದರ್ಜೆ ರೈಲ್ವೆ ನಿಲ್ದಾಣವನ್ನಾಗಿ ಮಾಡುವ ಪ್ರಯತ್ನಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News