×
Ad

ವಿಜಯ ಮಲ್ಯ ಡಿಫಾಲ್ಟರ್‌ ಆಗಿದ್ದಾರೆ ಅಂತಹವರು ಜೈಲಿನಲ್ಲಿರಬೇಕು: ವರುಣ್‌ಗಾಂಧಿ

Update: 2016-02-28 22:03 IST

ವಾರಣಾಸಿ: ಬಿಜೆಪಿ ನಾಯಕ ವರುಣ್‌ಗಾಂಧಿ ಆಡಳಿತರೂಢ ಸಮಾಜವಾದಿ ಪಾರ್ಟಿಯ ಮೇಲೆ ತೀವ್ರ ಮಾತಿನ ಪ್ರಹಾರ ನಡೆಸಿದ್ದಾರೆ. ಅಖಿಲೇಶ್ ಸರಕಾರವನ್ನು ಟೀಕಿಸಿದ ವರುಣ್‌ಗಾಂಧಿ ಇಂದು ಉತ್ತರ ಪ್ರದೇಶದ ಇಡೀ ವಾತಾವರಣ ಕೆಟ್ಟುಹೋಗಿದೆ. ಆದ್ದರಿಂದ ಇಲ್ಲಿಗೆ ಯಾವುದೇ ಉದ್ಯಮಿಗಳು ಕಾಲಿಡುತ್ತಿಲ್ಲ. ಸರಕಾರದ ದುರ್ಬಲ ಆಡಳಿತ ಇದಕ್ಕೆಕಾರಣವೆಂದು ವರುಣ್‌ಗಾಂಧಿ ಅಖಿಲೇಶ್ ಯಾದವ್ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.

ಇಲ್ಲಿಯಾರಿಗೂ ಕೆಲಸ ಮಾಡಲು ಕಷ್ಟ ಇದೆ. ಉತ್ತರಪ್ರದೇಶದಲ್ಲಿಹೂಡಿಕೆ ನಡೆಸುವವರ ಬಗ್ಗೆ ಪ್ರಸ್ತಾವಿಸುತ್ತಾ ಇಲ್ಲಿಗೆ ಬರಲು ಅವರು ಹೆದರುತ್ತಿದ್ದಾರೆ ಎಂದು ಹೇಳಿದ್ದಾರೆ. ಜಿಡಿಪಿಯಲ್ಲಿ ಶೇ.2ರಷ್ಟು ಆರೋಗ್ಯ ಮತ್ತು ಶೇ. 3ರಷ್ಟು ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿರುವುದು ದೌರ್ಬಾಗ್ಯಕರ ಎಂದೂ ವರುಣ್‌ಗಾಂಧಿ ಹೇಳಿದ್ದಾರೆ. ಯುವಕರ ಶಕ್ತಿಯನ್ನು ಸಕಾರಾತ್ಮಕವಾಗಿ ರಾಷ್ಟ್ರನಿರ್ಮಾಣಕ್ಕೆ ಬಳಸಿಕೊಳ್ಳಬೇಕಾಗಿದೆ. ಸಮಾಜದ ಕೊನೆಯ ವ್ಯಕ್ತಿಯ ಕಣ್ಣೀರನ್ನು ಒರೆಸಲು ಸಾಧ್ಯವಿರುವ ಮಾಧ್ಯಮ ರಾಜಕೀಯವಾಗಿದೆ. ಉತ್ತರ ಪ್ರದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ದೊರಕುವಂತಾಗಲು ಜಿಲ್ಲೆಗಳ ಅಭಿವೃಧ್ದಿ ನಕಾಶೆ ತಯಾರಿಸಬೇಕಾಗಿದೆ. ವಿಜಯ ಮಲ್ಯರ ಕುರಿತು ಪ್ರಸ್ತಾಪಿಸಿದ ವರುಣ್ ಅವರು ದೊಡ್ಡ ಬ್ಯಾಂಕ್ ಡಿಫಾಲ್ಟರ್ ಆಗಿದ್ದಾರೆ. ಅವರ ವಿರುದ್ಧ ಕ್ರಮ ಜರಗಿಸಬೇಕಾಗಿದೆ. ಅಂತಹವರ ಸ್ಥಳ ಜೈಲಾಗಿದೆ ಎಂದೂ ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News