×
Ad

ರಾಹುಲ್ ಗಾಂಧಿ, ಕೇಜ್ರಿವಾಲ್ , ಯೆಚೂರಿ ವಿರುದ್ಧ ದೇಶದ್ರೋಹದ ಎಫ್ ಐ ಆರ್ !

Update: 2016-02-28 23:23 IST

ಹೈದರಾಬಾದ್ , ಫೆ. 28 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧೀ , ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ , ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸಹಿತ ಒಂಬತ್ತು ಮಂದಿಯ ವಿರುದ್ಧ ಇಲ್ಲಿನ ಸರೂರ್ ನಗರ್ ಪೋಲಿಸರು ದೇಶದ್ರೋಹದ ಕೇಸು ಜಡಿದು ಎಫ್ ಐ ಆರ್ ಮಾಡಿದ್ದಾರೆ ! ವಕೀಲ ಜನಾರ್ದನ ಗೌಡ್ ಎಂಬವರು ನೀಡಿದ ದೂರಿನ ವಿಚಾರಣೆ ನಡೆಸಿ ಹೈದರಾಬಾದ್ ನ ನ್ಯಾಯಾಲಯವೊಂದು ನೀಡಿದ ಆದೇಶದ ಪ್ರಕಾರ ಈ ಎಫ್ ಐ ಆರ್ ಅನ್ನು ದಾಖಲಿಸಲಾಗಿದೆ. 

ಕಾಂಗ್ರೆಸ್ ಮುಖಂಡರಾದ ಆನಂದ್ ಶರ್ಮ, ಅಜಯ್ ಮಾಕನ್, ಸಿಪಿಐ ಮುಖಂಡ ಡಿ. ರಾಜಾ, ಜೆಡಿಯು ವಕ್ತಾರ ಕೆಸಿ ತ್ಯಾಗಿ , ಜೆ ಎನ್ ಯು ವಿದ್ಯಾರ್ಥಿ ನಾಯಕರಾದ ಕನ್ಹಯ್ಯ ಕುಮಾರ್ ಹಾಗು ಉಮರ್ ಖಾಲಿದ್ ದೂರಿನಲ್ಲಿ ಹೆಸರಿಸಲ್ಪಟ್ಟ ಇತರರು. 

ಮಾರ್ಚ್ 4 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ದೇಶದ್ರೋಹದ ಆರೋಪ ಹೊತ್ತ ಕನ್ಹಯ್ಯರನ್ನು ಬೆಂಬಲಿಸಿದ್ದರಿಂದ ಈ ಗಣ್ಯರೂ ದೇಶದ್ರೋಹ ಮಾಡಿದ್ದಾರೆಂದು ವಕೀಲ ಜನಾರ್ದನ ದೂರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News