ಪೂಂಜಾಲಕಟ್ಟೆ: ಸಾಮೂಹಿಕ ವಿವಾಹ
ಬಂಟ್ವಾಳ, ಫೆ.28: ತಾಲೂಕಿನ ಪೂಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 32ನೆ ಸಂಭ್ರಮಾಚರಣೆಯ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 8ನೆ ವರ್ಷದ 20 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು. ಬೆಂಗಳೂರು ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ವಿಧಾನ ಪರಿಷತ್‌ನ ವಿಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್, ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ ಮತ್ತು ವಸಂತ ಹೆಗ್ಡೆ ತಾಳಿ ವಿತರಿಸಿದರು. ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಉದ್ಯಮಿಗಳಾದ ಸುಂದರ್ ರಾಜ್ ಹೆಗ್ಡೆ, ರತ್ನಾಕರ ಗೋಪಾಲ ಪೂಜಾರಿ, ಭಿವಂಡಿ ಬಿಲ್ಲವ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಮೋಹನದಾಸ ವಿ.ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ವಿವಿ ವಲಯ ಮಟ್ಟದ ಕ್ರಿಕೆಟ್‌ಫಿಲೋಮಿನಾ ಕಾಲೇಜಿಗೆ ಚಾಂಪಿಯನ್‌ಶಿಪ್‌ಪುತ್ತೂರು, ಫೆ.28: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ಕ್ರಿಕೆಟ್ ತಂಡವು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಿಂದ ಸಂಘಟಿಸಲ್ಪಟ್ಟ ಮಂಗಳೂರು ವಲಯ ಮಟ್ಟದ ‘ಎಂ. ದಯಾನಂದ ಕಾಮತ್ ಟ್ರೋಫಿ-2016’ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟದಲ್ಲಿ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದುಕೊಂಡಿದೆ. ಸುರತ್ಕಲ್ ಎನ್‌ಐಟಿಕೆ ಕ್ರೀಡಾಂಗಣದಲ್ಲಿ ಜರಗಿದ ಪಂದ್ಯಾಟದಲ್ಲಿ ಫಿಲೋಮಿನಾ ಕಾಲೇಜು ತಂಡವು ಮಂಗಳೂರಿನ ಎಸ್‌ಡಿಎಂ ವ್ಯವಹಾರ ನಿರ್ವಹಣೆ ಕಾಲೇಜು ತಂಡವನ್ನು ಐದು ರನ್‌ಗಳಿಂದ ರೋಮಾಂಚಕವಾಗಿ ಪರಾಭವಗೊಳಿಸಿತು. ಸಮಾರೋಪ ಸಮಾರಂಭದಲ್ಲಿ ಕಸ್ತೂರಿ ಬಾಲಕೃಷ್ಣ ಪೈ, ಪಂದ್ಯಾಟದ ಸಂಯೋಜಕ ಸಂತ ಅಲೋಶಿಯಸ್ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡೊನೆಟ್ ಡಿಸೋಜ, ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.