×
Ad

ಮಂಜನಾಡಿ ಅಬ್ಬಾಸ್ ಮುಸ್ಲಿಯಾರ್‌ಗೆ ಗೌರವಾರ್ಪಣೆ

Update: 2016-02-29 00:16 IST

ಉಳ್ಳಾಲ, ಫೆ.28: ಧಾರ್ಮಿಕ ಕ್ಷೇತ್ರದಲ್ಲಿ ಮಾಡುವ ಸೇವೆಗೆ ಉತ್ತಮ ಗೌರವ ಇದೆ. ಈ ಕ್ಷೇತ್ರದಲ್ಲಿ ಸೇವೆ ಮಾಡುವವರನ್ನು ಗೌರವಿಸಬೇಕಾದ ಕರ್ತವ್ಯ ನಮ್ಮದಾಗಿರುತ್ತದೆ ಎಂದು ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು.
 
ಸಿರಾಜುಲ್ ಮುನೀರ್ ಅಸೋ ಸಿಯೇಶನ್, ಅಲ್ ಮದೀನಾ ಮತ್ತು ಸುನ್ನಿ ಕೋ ಆರ್ಡಿನೇಷನ್ ದೇರಳಕಟ್ಟೆ ವಲಯದ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಸಿಟಿಗ್ರೌಂಡ್‌ನಲ್ಲಿ ರವಿವಾರ ನಡೆದ ಸುನ್ನಿ ಸಮ್ಮೇಳನ ಮತ್ತು ಅಲ್ ಮದೀನಾದ ಸಾರಥಿ ಅಲ್‌ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್‌ಗೆ ಗೌರವಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸ್ಸೈಯದ್ ಇಸ್ಮಾಯೀಲ್ ತಂಙಳ್ ಮದನಿ ಉಜಿರೆ ವಹಿಸಿದ್ದರು. ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಶ್ರಫ್ ಸಖಾಫಿ ಕನ್ನಂಗಾರ್ ಸುನ್ನಿ ಆಶಯದ ಬಗ್ಗೆ ವಿವರಿಸಿದರು. ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ, ಹೈದರ್ ಪರ್ತಿಪ್ಪಾಡಿ, ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿ.ಎಂ. ಇಬ್ರಾಹೀಂ, ಸಚಿವ ಯು.ಟಿ. ಖಾದರ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿದರು.


 ಶೈಖುನಾ ತಾಜುಶ್ಯರೀಅ ಎಂ.ಆಲಿಕುಂಞಿ ಉಸ್ತಾದ್ ಶಿರಿಯ ಮನೆಗಳ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮದ ಪ್ರಚಾರ ಸಮಿತಿಯ ಸಂಚಾಲಕ ವಿ.ಯು. ಇಸ್ಹಾಕ್ ಝುಹ್‌ರಿ ಸಂದೇಶ ಭಾಷಣ ಮಾಡಿದರು. ಾರ್ಯಕ್ರಮದಲ್ಲಿ ಯೆನೆಪೊಯ ವಿವಿ ಕುಲಪತಿ ಯೆನೆಪೊಯ ಅಬ್ದುಲ್ಲ ಕುಂಞಿ, ದಾರುಲ್ ಇರ್ಶಾದ್ ಮಾಣಿಯ ಅಧ್ಯಕ್ಷ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್, ಎಸ್‌ಜೆಎಂ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆ.ಸಿ.ರೋಡ್, ಕೊಡಗು ಜಿಲ್ಲಾ ಸಹಾಯಕ ಖಾಝಿ ಮುಹಮ್ಮದ್ ಸಅದಿ ವಳವೂರು, ಡಾ. ಹುಸೈನ್ ಸಖಾಫಿ ಚುಳ್ಳಿಕೋಡ್, ಎಸ್‌ಜೆಎಂ ರಾಜ್ಯಾಧ್ಯಕ್ಷ ಸಅದ್ ಮುಸ್ಲಿಯಾರ್ ಆತೂರು, ಎಸ್‌ಇಡಿಸಿ ರಾಜ್ಯಾಧ್ಯಕ್ಷ ಕೆ.ಕೆ. ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ, ಶಿಹಾಬುದ್ದೀನ್ ತಂಙಳ್ ತಲಕ್ಕಿ, ಶರಫುದ್ದೀನ್ ತಂಙಳ್ ಮದನಿನಗರ, ಎಸ್.ಪಿ. ಹಂಝ ಸಖಾಫಿ, ಅಬ್ದುರ್ರಶೀದ್ ಝೈನಿ, ಎಚ್.ಎಚ್. ಉಂಞಿ ಹಾಜಿ ದೇರಳಕಟ್ಟೆ, ಮೂಸ ಸಖಾಫಿ ಕಲತ್ತೂರು, ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ, ಮಜೀದ್ ಹಾಜಿ ಉಚ್ಚಿಲ, ಎಸೆಸ್ಸೆಫ್ ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ಬಿ. ಮುಹಮ್ಮದ್ ಸಾದಿಕ್, ಮುಹಿಯ್ಯುದ್ದೀನ್ ಸಖಾಫಿ ತೋಕೆ, ಬೆಳ್ಮ ಗ್ರಾಪಂ ಉಪಾಧ್ಯಕ್ಷ ಸತ್ತಾರ್, ಮಾಜಿ ಜಿಪಂ ಸದಸ್ಯ ಎನ್.ಎಸ್. ಕರೀಂ, ಎಸ್‌ವೈಎಸ್ ಮುಡಿಪು ಸೆಂಟರ್ ಅಧ್ಯಕ್ಷ ಎಸ್.ಕೆ. ಖಾದರ್ ಹಾಜಿ, ಎಸ್‌ಜೆಎಂ ದೇರಳಕಟ್ಟೆ ರೇಂಜ್ ಅಧ್ಯಕ್ಷ ಇಸ್ಮಾಯೀಲ್ ಸಅದಿ ಉರುಮಣೆ, ಎಸ್‌ವೈಎಸ್ ಜಿಲ್ಲಾ ಸಮಿತಿ ಸದಸ್ಯ ಇಸ್ಮಾಯೀಲ್ ಸಅದಿ ಕಿನ್ಯ, ಮಂಜನಾಡಿ ಗ್ರಾಪಂ ಅಧ್ಯಕ್ಷ ಮುಹಮ್ಮದ್ ಅಸೈ, ಕೆ.ಎಂ. ಶರೀಫ್ ದೇರಳಕಟ್ಟೆ, ಕೆ.ಇ. ಅಬ್ದುಲ್ ಖಾದರ್ ರಝ್ವಿ ಸಾಲೆತ್ತೂರು, ಎಸ್‌ಜೆಎಂ ಮಂಜನಾಡಿ ರೇಂಜ್ ಅಧ್ಯಕ್ಷ ಕತರ್ ಬಾವ ಹಾಜಿಉಪಸ್ಥಿತರಿದ್ದರು.


ಸಿರಾಜುಲ್ ಮುನೀರ್ ಅಸೋಸಿಯೇಶನ್‌ನ ಕಾರ್ಯದರ್ಶಿ ಉಮರ್ ಸಖಾಫಿ ಕಲ್ಮಿಂಜ ಸ್ವಾಗತಿಸಿದರು. ಸ್ವಾಗತ ಸಮಿತಿಯ ಕನ್ವಿನರ್ ಕೆ.ಎ. ಅಬ್ದುರ್ರಹ್ಮಾನ್ ರಿಝ್ವಿ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಹುಸೈನ್ ಮುಸ್ಲಿಯಾರ್ ಉದ್ಯಾವರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News