×
Ad

ಮಂಗಳಯಾನ-2ಕ್ಕೆ ಇಸ್ರೋ ಸಿದ್ಧ: ಕಿರಣ್‌ಕುಮಾರ್

Update: 2016-02-29 00:17 IST

ಉಳ್ಳಾಲ, ಫೆ.28: ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲಯದಲ್ಲಿ ‘ಸ್ಟಾರ್ಟ್‌ಅಪ್, ಇನ್‌ಕ್ಯುಬೇಟರ್ ಮತ್ತು ಎಂಟರ್‌ಪ್ರೆನರ್‌ಶಿಪ್ ಎಂಬ ವಿಷಯದಲ್ಲಿ ಹಮ್ಮಿಕೊಂಡಿ ರುವ ಎರಡು ದಿನಗಳ ಅಂತಾ ರಾಷ್ಟ್ರೀಯ ಸಮ್ಮೇಳನದಲ್ಲಿಂದು ಇಸ್ರೋ ಮುಖ್ಯಸ್ಥ ಪದ್ಮಶ್ರೀ ಎ.ಎಸ್.ಕಿರಣ್‌ಕುಮಾರ್ ಪಾಲ್ಗೊಂಡಿದ್ದರು.
ವಿವಿಯ ಯೆನ್‌ಡ್ಯೂರೆನ್ಸ್ ರೆನ್ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಸ್ರೋ ಈಗಾ ಗಲೇ ಎರಡನೆಯ ಮಂಗಳಯಾನ ಸಾಕಾ ರಗೊಳಿಸಲು ಸಿದ್ಧವಾಗಿದೆ. ಮೊದಲ ಮಂಗಳಯಾನದಲ್ಲಿ ಪತ್ತೆಯಾಗಿರುವ ವೈಜ್ಞಾನಿಕ ವಿಷಯಗಳನ್ನು ವಿದ್ಯಾರ್ಥಿಗಳ ಸಂಶೋಧನೆಗೆ ಲಭ್ಯವಾಗುವ ಉದ್ದೇಶ ದಿಂದ ಸಂಸ್ಥೆಯ ವೆಬ್‌ಸೈಟ್‌ನಲ್ಲೂ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಯೆನೆಪೊಯ ವಿವಿ ಕುಲಾಧಿಪತಿ ವೈ.ಅಬ್ದುಲ್ಲ ಕುಂಞಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಕುಲಪತಿ ಡಾ.ಎಂ.ವಿಜಯ ಕುಮಾರ್ ಉಪಸ್ಥಿತರಿದ್ದರು. ಯೆನೆಪೊಯ ಇಸ್ಲಾಮಿಕ್ ಅಕಾಡಮಿ ಆಫ್ ಎಜುಕೇಶನ್‌ನ ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್ ಸ್ವಾಗತಿಸಿದರು. ಡಾ.ಶ್ರೀಕುಮಾರ್ ಮೆನನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News