ಡಾ.ಉಮರ್ ಬೀಜದಕಟ್ಟೆಗೆ ಪ್ರಶಸ್ತಿ
Update: 2016-02-29 00:17 IST
ಮುಂಬೈ, ಫೆ.28: ಬೆಂಗಳೂರಿನ ಫಾರ್ಮೇಡ್ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ತರಬೇತಿ ವಿಭಾಗದ ಮುಖ್ಯಸ್ಥ, ಹಿರಿಯ ಉಪಾಧ್ಯಕ್ಷ ಡಾ.ಉಮರ್ ಬೀಜದಕಟ್ಟೆ ಮೋಸ್ಟ್ ಇನ್‌ಫ್ಲುವೆನ್ಸಿಯಲ್ ಲೀಡರ್ಸ್ ಇನ್ ಇಂಡಿಯಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಂಬೈ ತಾಜ್ ಲ್ಯಾಂಡ್ಸ್ ಆ್ಯಂಡ್ ಹೊಟೇಲ್ನ ಸಭಾಂಗಣದಲ್ಲಿ ನಡೆದ ಇಲೆವೆಂತ್ ಗ್ಲೋಬಲ್ ಎಕ್ವೆಜಿಸನ್ ಆ್ಯಂಡ್ ರಾಸ್ ಬಿಕ್ ಅವಾರ್ಡ್ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವರ್ಲ್ಡ್ ಎಡ್.ಆರ್.ಡಿ. ಕಾಂಗ್ರೆಸ್ ಹಾಗೂ ಟೈಮ್ಸ್ ಎಕ್ಸೆಂಟ್ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳ ಹಲವಾರು ಸಾಧಕರು ಭಾಗವಹಿಸಿದ್ದರು. ಜಗತ್ತಿನ ಅತ್ಯಂತ ಪರಿಣಾಮಕಾರಿ 100 ಜನ ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರದ ನಾಯಕರ ಪಟ್ಟಿಯಲ್ಲೂ ಡಾ.ಉಮರ್ ಬೀಜದಕಟ್ಟೆ ಸೇರ್ಪಡೆಗೊಂಡಿದ್ದಾರೆ.