×
Ad

ಧೋನಿಗಾಗಿ ಮಿಡಿಯುವ ಪಾಕ್ ಅಭಿಮಾನಿಯ ಹೃದಯ

Update: 2016-02-29 00:18 IST

 ಮೀರ್ಪುರ, ಫೆ.28: ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿ ಮುಹಮ್ಮದ್ ಬಶೀರ್ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಜಗತ್ತಿನ ಎಲ್ಲೇ ಪಂದ್ಯ ನಡೆದರೂ ಅಲ್ಲಿ ಎರಡು ತಂಡಗಳನ್ನು ಹುರಿದುಂಬಿಸಲು ಇರುತ್ತಾರೆ.

60ರ ಹರೆಯದ ಬಶೀರ್ ಇದೀಗ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಬೆಂಬಲಿಸಲು ಮೀರ್ಪುರಕ್ಕೆ ತರೆಳಿದ್ದಾರೆ. ಎರಡೂ ತಂಡಗಳನ್ನು ಹುರಿದುಂಬಿಸುತ್ತಿದ್ದಾರೆ. ಆದರೆ ಅವರು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಿ.

ಬಶೀರ್‌ಗೆ ಚಿಕಾಗೊದಲ್ಲಿ ರೆಸ್ಟೊರೆಂಟ್ ಇದೆ. ಮೀರ್ಪರಕ್ಕೆ ತೆರಳುವ ಸ್ವಲ್ಪ ಮೊದಲು ಅವರಿಗೆ ನಾಲ್ಕನೆ ಬಾರಿ ಹೃದಯಾಘಾತವಾಗಿತ್ತು. ಆದರೆ ದೊಡ್ಡದೇನು ಅಲ್ಲ. ಲಘು ಹೃದಯಾಘಾತ. ಚೇತರಿಸಿಕೊಂಡ ಬಶೀರ್ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಲಿಲ್ಲ. ಪಾಕಿಸ್ತಾನ ವಿರುದ್ಧ ತನ್ನ ನೆಚ್ಚಿನ ಕ್ರಿಕೆಟಿಗ ಧೋನಿ ಆಡುವುದನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ವಿಮಾನವೇರಿ ಮೀರ್ಪುರ ತಲುಪಿರುವುದಾಗಿ ಕರಾಚಿ ಮೂಲದ ಕ್ರಿಕೆಟ್ ಅಭಿಮಾನಿ ಬಶೀರ್ ಹೇಳುತ್ತಾರೆ.

ಬಶೀರ್‌ಗೆ ಕೆಲವು ದಿನಗಳ ಹಿಂದೆ ಮಹೇಂದ್ರ ಸಿಂಗ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ. ಮುಂದಿನ ಟ್ವೆಂಟಿ-20 ವಿಶ್ವಕಪ್‌ಗೆ ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಒದಗಿಸಿಕೊಡುವುದಾಗಿ ಧೋನಿ ಭರವಸೆ ನೀಡಿರುವುದಾಗಿ ಬಶೀರ್ ತಿಳಿಸಿದ್ದಾರೆ.

ಅನಾರೋಗ್ಯದ ನಡುವೆಯೂ ಬಾಂಗ್ಲಾಕ್ಕೆ ತೆರಳುವ ನಿರ್ಧಾರದ ಬಗ್ಗೆ ಪತ್ನಿಯ ಅಸಮಾಧಾನ ಇತ್ತೇ ? ಎಂಬ ಪ್ರಶ್ನೆಗೆ ಉತ್ತರಿಸಿರುವ ಬಶೀರ್ ‘‘ನಾನು ಸಮಯಕ್ಕೆ ಸರಿಯಾಗಿ ಔಷಧಿಯನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದೇನೆ.ನಾನು ಯಾವಾಗಲೂ ಖುಶಿಯಿಂದ ಇರುವುದನ್ನು ಬಯಸುತ್ತಾಳೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯವೆಂದರೆ ನನಗೆ ಹಬ್ಬ ಇದ್ದಂತೆ. ಯಾರು ಗೆಲ್ಲುತ್ತಾರೆ ಎನ್ನುವುದು ನನಗೆ ಮುಖ್ಯವಲ್ಲ. ನಾನು ಎರಡೂ ತಂಡಗಳನ್ನು ಇಷ್ಟಪಡುವೆನು ಎಂದು ಬಶೀರ್ ಅಭಿಪ್ರಾಯಪಟ್ಟರು.

ಕ್ರೀಡಾಸ್ಫೂರ್ತಿಯನ್ನು ಎಲ್ಲ ದೇಶಗಳಲ್ಲಿ ನೋಡಲು ಅಸಾಧ್ಯ.ಕಳೆದ ಶನಿವಾರ ಭಾರತ-ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ವೇಳೆ ಉಭಯ ತಂಡಗಳ ಅಭಿಮಾನಿಗಳು ಘೋಷಣೆ ಕೂಗಿದರು. ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಬಶೀರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News