ಇಂದಿನ ಕಾರ್ಯಕಮ
ಉಡುಪಿ ನಗರಸಭೆ ಸಾಮಾನ್ಯ ಸಭೆ
ಉಡುಪಿ, ಫೆ.28: ಉಡುಪಿ ನಗರಸಭೆಯ ಸಾಮಾನ್ಯ ಸಭೆಯು ಫೆ.29ರಂದು ಬೆಳಗ್ಗೆ 10:30ಕ್ಕೆ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಛಾಯಾಚಿತ್ರ ಪ್ರದರ್ಶನ
ಉಡುಪಿ, ಫೆ.28: ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಜೀವನ, ಸಾಧನೆಗಳನ್ನು ಸಾರುವ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವು ಉಡುಪಿಯಲ್ಲಿ ಫೆ.29 ಹಾಗೂ ಮಾ.1ರಂದು ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ನಡೆಯಲಿದೆ. ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಉದ್ಘಾಟಿಸಲಿದ್ದಾರೆ ಎಂದು ವಾರ್ತಾ ಇಲಾಖೆಯ ಪ್ರಕಟನೆ ತಿಳಿಸಿದೆ.
ಐಕ್ಯರಂಗ ಸಮಾವೇಶ
ಕಾಸರಗೋಡು, ಫೆ.28: ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆ ಕುರಿತು ಚರ್ಚಿಸಲು ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಜಿಲ್ಲಾ ಸಮಾವೇಶವು ಫೆ.29ರಂದು ಕಾಸರಗೋಡು ನಗರಸಭಾ ವನಿತಾ ಭವನದಲ್ಲಿ ನಡೆಯಲಿದೆ.ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಮುಸ್ಲಿಂ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಪಿಎ ಮಜೀದ್ ಮತ್ತಿತರರು ಉಪಸ್ಥಿತರಿರುವರು.
ನೂತನ ಕಟ್ಟಡ ಉದ್ಘಾಟನೆ
ಕಾಸರಗೋಡು, ಫೆ.28: ಇಲ್ಲಿನ ಅಣಂಗೂರಿನಲ್ಲಿ ನಿರ್ಮಿಸಿರುವ ಜಿಲ್ಲಾ ಪಶುಸಂಗೋಪನಾ ಕೇಂದ್ರದ ನೂತನ ಕಟ್ಟಡವನ್ನು ಫೆ,29ರಂದು ಕೇರಳ ಕೃಷಿ ಸಚಿವ ಕೆ .ಪಿ ಮೋಹನನ್ ಉದ್ಘಾಟಿಸುವರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ಮೆಟ್ರಿಕ್ ಮೇಳ
ಮೂಡುಬಿದಿರೆ, ಫೆ.28: ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಡುಬಿದಿರೆ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ - ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಕಲಿಕೋಪಕರಣ, ಮೆಟ್ರಿಕ್ ಮೇಳ ಹಾಗೂ ವಸ್ತು ಪ್ರದರ್ಶನವನ್ನು ದ.ಕ.ಜಿಪಂ ಹಿ.ಪ್ರಾ. ಶಾಲೆ ಜ್ಯೋತಿನಗರದಲ್ಲಿ ಫೆ.29ರಂದು ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.