×
Ad

ಗೋವು ಪ್ರದರ್ಶನ: ‘ಹಸು’ ಪ್ರಶಸ್ತಿ ಪ್ರದಾನ

Update: 2016-02-29 00:19 IST

ಉಡುಪಿ, ಫೆ.28: ಪೆರಂಪಳ್ಳಿ ಯುವಕ ಮಂಡಲದ ಆಶ್ರಯದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಣಿಪಾಲ ಪಶು ಚಿಕಿತ್ಸಾ ಲಯ, ಪೆರಂಪಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಹಯೋಗದೊಂದಿಗೆ ಪೆರಂಪಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಗೋವು ಪ್ರದರ್ಶನದಲ್ಲಿ ಶಿವರಾಮ್ ಶೆಟ್ಟಿಯವರ ಹಸು ಅತ್ಯುತ್ತಮ ಹಸು ಪ್ರಶಸ್ತಿ ಹಾಗೂ 10,000 ರೂ. ನಗದು ಬಹುಮಾನ ಗೆದ್ದುಕೊಂಡಿತು.
 ಕರುಗಳ ವಿಭಾಗದಲ್ಲಿ ಸುಮತಿ ಪ್ರಥಮ, ಬಾಬು ನಾಯ್ಕ ದ್ವಿತೀಯ, ಕಮಲಾ ಅಮೀನ್ ತೃತೀಯ, ಕಡಸು ವಿಭಾಗದಲ್ಲಿ ಸುಮತಿ ಭಟ್ ಪ್ರಥಮ, ಸುಮಿತ್ರ ನಾಯ್ಕಿ ದ್ವಿತೀಯ, ಗ್ರೆಗರಿ ತೃತೀಯ, ದೇಶಿ ತಳಿ ವಿಭಾಗದಲ್ಲಿ ವಿಮಲ ಬಡಗುಬೆಟ್ಟು ಪ್ರಥಮ, ಸಂಜೀವ ದ್ವಿತೀಯ, ಜಾನ್ ಡಿಸೋಜ ತೃತೀಯ, ಜರ್ಸಿ ಹಸುಗಳ ವಿಭಾಗದಲ್ಲಿ ಬಿಪೀಲ್ ಪ್ರಥಮ, ಹರೀಶ್ ದ್ವಿತೀಯ, ರತ್ನಾ ತೃತೀಯ, ಎಚ್.ಎಫ್.ತಳಿ ವಿಭಾಗದಲ್ಲಿ ಗುರುಪ್ರಸಾದ್ ಪ್ರಥಮ, ಡೋರಿನಾ ದ್ವಿತೀಯ, ಪ್ರಕಾಶ್ ತೃತೀಯ ಬಹುಮಾನ ಪಡೆದರು.
ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಶಾಸಕ ಪ್ರಮೋದ್ ಮಧ್ವರಾಜ್‌ಬಹುಮಾನಗಳನ್ನು ವಿತರಿಸಿದರು. ಉಡುಪಿ ನಗರ ಸಭೆ ಉಪಾಧ್ಯಕ್ಷೆ ಅಮೃತ ಕೃಷ್ಣಮೂರ್ತಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸತ್ಯನಾರಾಯಣ, ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಜಾನಕಿ ಹಂದೆ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಸಿದ್ದ್ಧರಾಮಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News