×
Ad

ಇಂದ್ರಾಳಿ ಹಿಂದೂ ರುದ್ರಭೂಮಿ ಉದ್ಘಾಟನೆ

Update: 2016-02-29 00:20 IST

ಫೆ.28: ಉಡುಪಿ ನಗರಸಭೆಯ 19.35ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾದ ಇಂದ್ರಾಳಿ ಹಿಂದೂ ರುದ್ರಭೂಮಿಯನ್ನು ಶಾಸಕ ಪ್ರಮೋದ್ ಮಧ್ವರಾಜ್ ರವಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ನಗರದಲ್ಲಿ ಈವರೆಗೆ ಬೀಡಿನಗುಡ್ಡೆಯ ರುದ್ರಭೂಮಿ ಒಂದೇ ಆಗಿದ್ದುದರಿಂದ ಅದರ ಮೇಲೆ ಹೆಚ್ಚಿನ ಒತ್ತಡವಿದ್ದು, ಆ ಹಿನ್ನೆಲೆಯಲ್ಲಿ ಇಂದ್ರಾಳಿ ರುದ್ರಭೂಮಿ ಯನ್ನು ಅಭಿವೃದ್ಧಿಪಡಿಸಿ ದಿನದ 24 ಗಂಟೆ ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.ುದ್ರಭೂಮಿಯ ನಿರ್ವಹಣೆ ಮಾಡುವವರಿಗೆ ನಗರಸಭೆಯಿಂದ ಸಂಬಳ ಹಾಗೂ ರುದ್ರಭೂಮಿ ಆವರಣದಲ್ಲಿ ಮನೆ ಒದಗಿಸಲಾಗಿದೆ. ಈ ರುದ್ರಭೂಮಿಗೆ ಮೃತ ದೇಹಗಳನ್ನು ಸಾಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಉದ್ಯಮಿ ಜಿ.ಶಂಕರ್ 8.5ಲಕ್ಷ ರೂ. ಮೊತ್ತದ ಆ್ಯಂಬುಲೆನ್ಸ್‌ನ್ನು ಕೊಡಗೆಯಾಗಿ ನೀಡಲು ಮುಂದೆ ಬಂದಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಈ ಸಂದರ್ಭ ನಗರಸಭೆ ಅಧ್ಯಕ್ಷ ಯುವರಾಜ್, ಪೌರಾಯುಕ್ತ ಡಿ. ಮಂಜುನಾಥಯ್ಯ, ಸದಸ್ಯರಾದ ಶೋಭಾ ಪೂಜಾರಿ, ವಿಜಯ ಮಂಚಿ, ಗೀತಾ ಶೇಟ್, ಶಶಿರಾಜ್ ಕುಂದರ್, ವೈದ್ಯೆ ಡಾ.ಗೌರಿ, ದಿನಕರ ಪೂಂಜಾ, ಕುಶಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಾಮನಿರ್ದೇಶಿತ ಸದಸ್ಯ ಜನಾರ್ದನ ಭಂಡಾರ್ಕರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News