ಮಂಗಳೂರು ಕ್ಯಾಂಪ್ಕೋ ದಿಂದ ಐಡಿಯಲ್ ಐಸ್ ಕ್ರೀಂ ಸಂಸ್ಥೆಗೆ ಅಭಿನಂದನೆ

Update: 2016-02-29 04:20 GMT

ಮಂಗಳೂರು, ಫೆ.29: ಮಂಗಳೂರಿನ ಪ್ರತಿಷ್ಠಿತ ಐಡಿಯಲ್ ಐಸ್ ಕ್ರೀಂ ನವರು ಇತ್ತೀಚೆಗೆ ಭಾರತೀಯ ಹಾಲು ಮಾರಾಟಗಾರರ ಸಂಸ್ಥೆಯ ಆಶ್ರಯದಲ್ಲಿ ಗೋರ್ಗಾಂವ್ ಏರ್ಪಡಿಸಿದ್ದ  "ದಿ ಗ್ರೇಟ್  ಇಂಡಿಯನ್ ಐಸ್ ಕ್ರೀಂ ಕಾಂಟೆಸ್ಟ್ 2016" ನಲ್ಲಿ ಭಾಗವಹಿಸಿ, ಚಾಕಲೇಟ್ ವಿಭಾಗದಲ್ಲಿ ಚಿನ್ನದ ಪದಕ, ವೆನಿಲ್ಲಾ ವಿಭಾಗದಲ್ಲಿ ಚಿನ್ನದ ಪದಕ, ಕೊಕ್ಕೊ ಚಿಲ್ಲಿ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಸ್ವಿಸ್ ಚಾಕಲೇಟ್ ಐಸ್ ಕ್ರೀಂ ಗಾಗಿ  ಉತ್ತಮ ಐಸ್ ಕ್ರೀಂ ಪದಕಗಳನ್ನು ಗಳಿಸಿಕೊಂಡಿದೆ. 

ಇದಕ್ಕಾಗಿ ಸಹಕಾರಿ ಕ್ಷೇತ್ರದಲ್ಲಿ ವಿಶ್ವಾಸವಿಟ್ಟಿರುವ ಕ್ಯಾಂಪ್ಕೋ ಮಂಗಳೂರು ಆಹಾರ ಉದ್ಯಮದಲ್ಲಿ ಕೊಕ್ಕೊ ಆಧಾರಿತ ವಸ್ತುಗಳನ್ನು 1986 ರಿಂದಲೇ ಪ್ರಾರಂಭಿಸಿದ್ದು, ಇದೀಗ  ತನ್ನ ಗೌರವಾನ್ವಿತ ಗ್ರಾಹಕರಾದ ಐಡಿಯಲ್ ಐಸ್ ಕ್ರೀಂ ಸಂಸ್ಥೆಯು ಉತ್ಪಾದನೆಯಲ್ಲಿ ಯಶಸ್ವಿಯಾಗಿ ಚಿನ್ನದ ಪದಕ ಗಳಿಸಿರುವುದಕ್ಕೆ ಅಭಿನಂದಿಸಿದೆ. 

ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಅತಿಥಿಗಳನ್ನು ಸ್ವಾಗತಿಸುತ್ತಾ, ಉತ್ಪಾದನೆಯ ಗುಣಮಟ್ಟದಲ್ಲಿ ನಂಬಿಕೆ ಇಟ್ಟಿರುವವರು ಯಶಸ್ವಿಯಾಗುತ್ತಾರೆ. ಎಲ್ಲರಿಂದಲೂ ಗುರುತಿಸಲ್ಪಟ್ಟು ಹೊಗಳಿಕೆಗೆ ಕಾರಣವಾದ ಐಡಿಯಲ್ ಐಸ್ ಕ್ರೀಂ ಸಂಸ್ಥೆ ಇದನ್ನು ಸಾಧಿಸಿದೆ ಎಂದರಲ್ಲದೆ ಸ್ಪರ್ಧೆಯಲ್ಲಿ ಜಯಗಳಿಸಿ ಬಹುಮಾನ ಗಳಿಸಿದ್ದಕ್ಕಾಗಿ ಅವರು ಅಭಿನಂದಿಸಿದರು.

 ಕೈಗಾರಿಕಾ ಚಾಕಲೇಟ್  ವಿಭಾಗದ ಮುಖ್ಯಸ್ಥೆ ಅನಿತಾ ಜೆಸುಮನ್ ಅಭಿನಂದನಾ ಭಾಷಣ ಮಾಡಿದರು. 

ಕ್ಯಾಂಪ್ಕೋದ ಅಧ್ಯಕ್ಷ ಸತೀಶ್ ಚಂದ್ರ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ,  ಕಠಿಣ ಶ್ರಮ ಮತ್ತು ಉತ್ತಮ ವ್ಯವಹಾರವು ಐಡಿಯಲ್ ಕುಟುಂಬಕ್ಕೆ ಆಹಾರ ವ್ಯವಹಾರದಲ್ಲಿ ಯಶಸ್ವಿಯಲ್ಲಿ ಮುನ್ನಡೆಯುವಂತಾಗಿದೆ. ಪೌಷ್ಠಿಕ ಆಹಾರ ವಸ್ತುಗಳನ್ನು ಹೆಚ್ಚಾಗಿ ತಯಾರಿಸಿ ರೈತರನ್ನು ಸಬಲೀಕರಣಗೊಳಿಸಿ ರಾಷ್ಟ್ರಾಧ್ಯಂತ ಆರ್ಥಿಕ ಮಟ್ಟವನ್ನು ಹೆಚ್ಚಿಸುವಂತಾಗಬೇಕು ಎಂದರು. 

ಐಡಿಯಲ್ ಐಸ್ ಕ್ರೀಂ ಸಂಸ್ಥೆಯ ಮುಖ್ಯಸ್ಥ ಮುಕುಂದ ಕಾಮತ್ ಕೃತಜ್ಞತೆ ಸಲ್ಲಿಸಿ ಮಾತನಾಡುತ್ತಾ, ಸಮಯಕ್ಕೆ ಅನುಗುಣವಾಗಿ ಕ್ಯಾಂಪ್ಕೋ ಉತ್ತಮ ಗುಣಮಟ್ಟದ ಕೊಕ್ಕೋ ಸಂಬಂಧಿತ ವಸ್ತುಗಳನ್ನು ನೀಡಿರುವುದರಿಂದಾಗಿ ಉತ್ತಮವಾದ ಐಸ್ ಕ್ರೀಂ ಗಳನ್ನು ಅಭಿವೃದ್ಧಿ ಪಡಿಸಿ ಗ್ರಾಹಕರ ಅಗತ್ಯತೆಗೆ ಅನುಸಾರ ಉತ್ಪನ್ನಗಳನ್ನು ತಯಾರಿಸುವ ಮೂಲಕ ದೇಶದ ರೈತರಿಗೆ ಸಹಕರಿಸುತ್ತಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News