×
Ad

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ವತಿಯಿಂದ ಬೇಡಿಕೆಗಳ ಈಡೇರಿಕೆಗೆ ಮನವಿ

Update: 2016-02-29 14:15 IST

ಪುತ್ತೂರು, ಫೆ.29: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ತಾಲೂಕು ಇದರ ವತಿಯಿಂದ ರಾಜ್ಯ ನಿವೃತ್ತ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪುತ್ತೂರು ತಹಾಶಿಲ್ದಾರರ ಮೂಲಕ ಸೋಮವಾರ ಮನವಿ ಸಲ್ಲಿಸಲಾಯಿತು.

ನಿವೃತ್ತ ನೌಕರರ ಮುಖ್ಯ ಬೇಡಿಕೆಯಾದ ಆರೋಗ್ಯ ಸಂಜೀವಿನಿ ಭಾಗ್ಯ, 65ರಿಂದ 100 ವರ್ಷಗಳ ವರೆಗಿನ ನಿವೃತ್ತರಿಗೆ ವಯೋಮಾನ ಭತ್ತೆ, ಶವ ಸಂಸ್ಕಾರ ಭತ್ತೆ, ಕೇಂದ್ರದ 7ನೇ ವೇತನದ ಮಾದರಿಯಲ್ಲಿ ನಿವೃತ್ತಿ ವೇತನ ಹೆಚ್ಚಿಸುವ ಬಗ್ಗೆ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ. ರಾಮಯ್ಯ ನಾಯ್ಕಿ, ಉಪಾಧ್ಯಕ್ಷರಾದ ಹಾಜಿ ಎ. ಇಬ್ರಾಹಿಂ, ಯಶೋಧಾ ರಾವ್, ಕಾರ್ಯದರ್ಶಿ ಐತ್ತಪ್ಪ ನಾಯ್ಕ, ಜೊತೆ ಕಾರ್ಯದರ್ಶಿ ಎಂ. ಶರತ್ ಕುಮಾರ್ ರಾವ್, ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ, ಲೆಕ್ಕ ಪರಿಶೋಧಕ ಚಂದ್ರಶೇಖರ ನಾಯ್ಕಾ, ಸದಸ್ಯರಾದ ಕೆ. ನಾರಾಯಣ ರೈ, ಬಿ. ಜನಾರ್ಧನಯ್ಯ, ಪಿ. ಜಯಂತಿ ನಾಯ್ಕಾ, ಎನ್. ನಾರ್ಣಪ್ಪ ನಾಯ್ಕ, ಶಿವಾನಂದ, ಶಂಕರಿ ಎಂ.ಎಸ್.ಭಟ್, ಲೀನಾ ಪುಡ್ತಾದೋ, ಸೂರಪ್ಪ ಗೌಡ, ನಿರ್ಮಲಾ ಬಿಕೆ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News