ವಿವಾಹ ಸಮಾರಂಭದಲ್ಲಿ ಗುಂಡು ಹಾರಾಟ: ಅಧ್ಯಾಪಕಿ ಮೃತ್ಯು!

Update: 2016-02-29 12:58 GMT

ಬಟಾಲಾ,ಫೆ.29: ನಿನ್ನೆಸಂಜೆ ನಾಲ್ಕುಗಂಟೆ ವೇಳೆ ಠಿಂಡ್ಸಾ ಪ್ಯಾಲೆಸ್‌ನಲ್ಲಿ ನಡೆಯುತ್ತಿದ್ದ ವಿವಾಹಕ್ಕೆ ಸಂಬಂಧಿಸಿದ ಸಮಾರಂಭವೊಂದರಲಿ ್ಲಕೆಲವು ಯುವಕರು ಸರಕಾರಿ ಶಾಲೆಯ ಅಧ್ಯಾಪಿಕೆಯೊಬ್ಬರನ್ನು ಗುಂಡಿಟ್ಟು ಸಾಯಿಸಿದ್ದಾರೆ. ವರದಿಯಾಗಿರುವಂತೆ ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ರೂಪಿಂದರ್ ಕೌರ್ ಎಂಬವರನ್ನು ಪಾನಮತ್ತರಾಗಿದ್ದ ಯುವಕರು ಚುಡಾಯಿಸಿದ್ದು ಅದನ್ನು ಆಕೆ ವಿರೋಧಿಸಿದಾಗ ಯುವಕನೊಬ್ಬ ತನ್ನ ರಿವಾಲ್ವರ್‌ನಿಂದ ಆಕೆಯ ಹಣೆಗೆ ಗುಂಡು ಹಾರಿಸಿದ್ದಾನೆ.ತಕ್ಷಣ ರೂಪಿಂದರ್ ಕೌರ್‌ರನ್ನು ಬಟಾಲಾದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಅವರು ಮೃತರಾಗಿದ್ದಾರೆ. ಘಟನೆಯ ಸುದ್ದಿ ತಿಳಿದೊಡನೆ ಪೊಲೀಸರು ಆಗಮಿಸಿದ್ದು ಶವವನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಮೃತ ಮಹಿಳೆ ಬಟಾಲಾ ನಿವಾಸಿಯಾಗಿದ್ದು ನಿರಂಜನ್ ಅವೆನ್ಯೂ ಬಟಾಲಾದ ಜೋಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪ್ಯೂಟರ್ ಶಿಕ್ಷಕಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News