ವಿಟ್ಲ :ಹನುಮಂತಪ್ಪ ಕೊಪ್ಪದ್ ಟ್ರೋಫಿ-2016 ಪ್ರೀಮಿಯರ್ ಲೀಗ್ ಕಬಡ್ಡಿ ಪಂದ್ಯಾಟ
ವಿಟ್ಲ : ಕುಕ್ಕಾಜೆ ಫ್ರೆಂಡ್ಸ್ ಕ್ಲಬ್ ಹಾಗೂ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಇದರ ಆಶ್ರಯದಲ್ಲಿ ಕುಕ್ಕಾಜೆ ಶಾಲಾ ಮೈದಾನದಲ್ಲಿ ನಡೆದ ಹನುಮಂತಪ್ಪ ಕೊಪ್ಪದ್ ಟ್ರೋಫಿ-2016 ಪ್ರೀಮಿಯರ್ ಲೀಗ್ ಕಬಡ್ಡಿ ಪಂದ್ಯಾಟದಲ್ಲಿ ಕುಕ್ಕಾಜೆ ಸೂಪರ್ ಕಿಂಗ್ಸ್ ತಂಡವು ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು.
6 ತಂಡಗಳು ಭಾಗವಹಿಸಿದ್ದ ಈ ಪ್ರೀಮಿಯರ್ ಲೀಗ್ ಮಾದರಿಯ ಪಂದ್ಯಾಟದಲ್ಲಿ ಇರಾ ವಾರಿಯರ್ಸ್ ಇರಾ ತಂಡವು ದ್ವಿತೀಯ, ಸೆವೆನ್ ಟೈಗರ್ಸ್ ಎನ್.ಸಿ.ರೋಡ್ ತಂಡ ತೃತೀಯ ಹಾಗೂ ಸ್ಟಾರ್ ರೈಡರ್ಸ್ ಪದವು ತಂಡವು ಚತುರ್ಥ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.
ಸರಣಿ ಶ್ರೇಷ್ಠ ಹಾಗೂ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಕುಕ್ಕಾಜೆ ಸೂಪರ್ ಕಿಂಗ್ಸ್ ತಂಡದ ರಶೀದ್ ಬನಾರಿ ಪಡೆದುಕೊಂಡರೆ, ಅದೇ ತಂಡದ ಶಾಫಿ ಕುಕ್ಕಾಜೆ ಹಿಡಿತಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಇರಾ ವಾರಿಯರ್ಸ್ ತಂಡದ ಇರ್ಶಾದ್ ಆಲ್ ರೌಂಡರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸಭಾ ಕಾರ್ಯಕ್ರಮವನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಿದರು. ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾ.ಪಂ. ಸದಸ್ಯ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲುಕ್ಮಾನ್, ಪತ್ರಕರ್ತ ಲುಕ್ಮಾನ್, ಪತ್ರಕರ್ತ ಲತೀಫ್ ನೇರಳಕಟ್ಟೆ, ತಾಲೂಕು ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಬಂಗೇರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಹಾಜಿ ಕೆ. ಶೇಖಬ್ಬ, ಕೆ.ಎಸ್. ಹಮೀದ್ ಕಂಬಳಬೆಟ್ಟು, ಮಂಚಿ ಗ್ರಾ.ಪಂ. ಸದಸ್ಯ ಶಮೀವುಲ್ಲಾ, ಮಾಜಿ ಅಧ್ಯಕ್ಷ ಶ್ರೀಪತಿ ರಾವ್, ಮೋಹನ್ ಕುಕ್ಕಾಜೆ, ಸಂತೋಷ್ ಕೆ.ಎಂ.ಎಂ. ಕಾಪಿಕಾಡ್, ಕುಕ್ಕಾಜೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅನ್ಸಾರ್ ಡಿ.ಕೆ., ಸದಸ್ಯ ಹಮೀದ್ ಪುಚ್ಚಕೆರೆ, ನಝೀರ್ ನಾಡಾಜೆ, ರಾಜೇಶ್ ಶೆಟ್ಟಿ ಕುಕ್ಕಾಜೆ, ಡಿಲ್ಸನ್ ಪಿರೇರಾ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್ ಕುಕ್ಕಾಜೆ, ಮಂಚಿ ಗ್ರಾ.ಪಂ. ಸದಸ್ಯ ಇಬ್ರಾಹಿಂ ಕುಕ್ಕಾಜೆ, ಕುಕ್ಕಾಜೆ ನವಯುಗ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಸೈನಾರ್, ಮಂಚಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಕರೀಂ ಬೊಳ್ಳಾಯಿ, ಫೈಸಲ್ ಕುಕ್ಕಾಜೆ, ಝುಬೈರ್ ಕುಕ್ಕಾಜೆ ಮೊದಲಾದವರು ಉಪಸ್ಥಿತರಿದ್ದರು.
ಕುಕ್ಕಾಜೆ ಫ್ರೆಂಡ್ಸ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಸ್ವಾಗತಿಸಿ, ಕಾರ್ಯದರ್ಶಿ ಅಶ್ರಫ್ ವಂದಿಸಿದರು. ದಿವಾಕರ ಉಪ್ಪಳ ಹಾಗೂ ನಝೀರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.