×
Ad

ಉಬರಡ್ಕ ಮಿತ್ತೂರು ಸೊಸೈಟಿ: ಬಿಜೆಪಿ ಜಯಭೇರಿ

Update: 2016-02-29 19:08 IST

ಸುಳ್ಯ: ಉಬರಡ್ಕ ಮಿತ್ತೂರು ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ 10 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿದೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಮದುವೆಗದ್ದೆ ದಾಮೋದರ ಗೌಡ 417 ಮತ, ರತ್ನಾಕರ ಗೌಡ ಬಳ್ಳಡ್ಕ 383 ಮತ, ಹರೀಶ್ ರೈ ಉಬರಡ್ಕ 470 ಮತ, ರಾಜೇಶ್ ಭಟ್ ನೆಕ್ಕಿಲ 429 ಮತ, ಸಾಲಗಾರ ಪರಿಶಿಷ್ಟ ಜಾತಿ-ಪಂಗಡ ಕ್ಷೇತ್ರದಲ್ಲಿ ಜಗದೀಶ್ ಕಕ್ಕೆಬೆಟ್ಟು 466 ಮತ, ಸಾಲಗಾರ ಮಹಿಳಾ ಕ್ಷೇತ್ರದಿಂದ ಶಾರದಾ ಡಿ.ಶೆಟ್ಟಿ 477 ಮತ ಮತ್ತು ನಳಿನಾಕ್ಷಿ ಕೈಪೆ 454 ಮತ, ಹಿಂದುಳಿದ ವರ್ಗ ‘ಎ’ ಸಾಲಗಾರ ಕ್ಷೇತ್ರದಿಂದ ಹರೀಶ್ ಆಚಾರ್ಯ 399 ಮತ, ಭಾಸ್ಕರ ರಾವ್ ಯು.ವಿ. 437 ಮತ, ಸಾಲಗಾರರಲ್ಲದ ಕ್ಷೇತ್ರದಿಂದ ಹರೀಶ್ ಮಾಣಿಬೆಟ್ಟು 115 ಮತಗಳಿಂದ ಜಯ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News