×
Ad

ಮಂಗಳೂರು : ಅನಂತ ಹೆಗಡೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್

Update: 2016-02-29 20:20 IST

ಮಂಗಳೂರು,ಫೆ29:ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಸಂಸದ ಅನಂತ ಕುಮಾರ್ ಹೆಗಡೆಯ ವಿರುದ್ಧ ಶೀಘ್ರ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವಂತೆ  ಮಂಗಳೂರು ಪೊಲೀಸ್ ಠಾಣೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಇಸ್ಲಾಂ ಧರ್ಮದ ಬಗ್ಗೆ ತುಚ್ಛವಾಗಿ ಮಾತನಾಡಿದ ಮನೋರೋಗಿ ಅನಂತ ಕುಮಾರ ಹೆಗಡೆ ಬಹಿರಂಗ ಚರ್ಚೆಗೆ ಸಿಧ್ದನಿದ್ದಾನೆಯೇ? ಎಂದು ಸುಹೈಲ್ ಕಂದಕ್ ಪ್ರಶ್ನಿಸಿದ್ದಾರೆ.
1925 ರಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂದು ಪ್ರತಿಜ್ಞೆ ಮಾಡಿ ಭಾರತದ ಸ್ವಾತಂತ್ರ ಸಂಗ್ರಾಮದ ಸಂಧರ್ಭ ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡ, ಭಾರತೀಯರು ಜಾತಿ, ಮತ ಧರ್ಮಗಳನ್ನೆಲ್ಲಾ ಬದಿಗಿಟ್ಟು ಒಂದಾಗಿ ಹೋರಾಡಿ ಗಳಿಸಿದ ಸ್ವಾತಂತ್ರ್ಯಕ್ಕೆ ನೇತ್ರತ್ವ ನೀಡಿದ ಮಹಾತ್ಮ ಗಾಂಧೀಜಿಯನ್ನು ಹತ್ಯೆಗೈದ,ಸಂವಿಧಾನದ ಆಶಯಗಳಿಗೆ ಮಸಿ ಬಳಿದು ಪವಿತ್ರ ಬಾಬ್ರಿ ಮಸೀದಿಯನ್ನು ಕೆಡವಿದ,ಗೋಧ್ರಾ ರೈಲು ಬೋಗಿಯಲ್ಲಿ ಕೀಳು ಜಾತಿಯರನ್ನು ಒಂದೆಡೆ ಸೇರಿಸಿ ಅದಕ್ಕೆ ಬೆಂಕಿ ಕೊಟ್ಪು ಹಲವಾರು ಕೀಳು ಜಾತಿಯವರನ್ನು ಬಲಿಪಡೆದು ಅದನ್ನು ಮುಸ್ಲಿಂ ಸಮುದಾಯದ ತಲೆಗೆ ಕಟ್ಟಿ ಅವರ ಮಾರಣಹೋಮ ನಡೆಸಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದುರುಳಿಸಿ ರಾಜಕೀಯ ಲಾಭ ಪಡೆದ,ಮಕ್ಕಾ ಮಸೀದಿ ಸ್ಪೋಟ ಕೇರಳದ ಆರ್.ಎಸ್.ಎಸ್ ಶಾಖೆಯಲ್ಲಿ ಬಾಂಬ್ ತಯಾರಿಸುವ ಸಂಧರ್ಭ ಸಂಭವಿಸಿದ ಸ್ಪೋಟ ಹಾಗೂ ಕೇರಳದಲ್ಲಿ ಕೆಲವು ಮಕ್ಕಳನ್ನು ಒತ್ತೆ ಇರಿಸಿ ಅವರಿಗೆ ಬುರ್ಖಾ ಹಾಕಿ ಗಡ್ಡ ತೊಡಿಸಿ ಬಾಂಬ್ ಸ್ಫೋಟಿಸಿ ಮುಸ್ಲಿಮರ ಮೇಲೆ ಅಪವಾದವನ್ನು ಹೊರಿಸಿದ ಸಂಘ ಪರಿವಾರದ ಫ್ಯಾಸಿಸಂ ಅಮಲೇರಿದ ಪ್ರಚಾರ ಪ್ರಿಯ ಹೇಡಿ ಅನಂತ ಕುಮಾರ್ ಹೆಗಡೆಯ ಇಸ್ಲಾಮನ್ನು ಜಗತ್ತಿನಿಂದ ನಿರ್ಣಾಮಗೊಳಿಸಿದರಷ್ಟೇ ಭಯೋತ್ಪಾದನೆ ಅಳಿಯಲು ಸಾಧ್ಯವೆಂಬ ಬೇಜವಾಬ್ದಾರಿ ಹೇಳಿಕೆಯನ್ನು ಖಂಡಿಸುವುದರೊಂದಿಗೆ ಆತನಿಗೆ ಮನೋ ಚಿಕಿತ್ಸೆಯನ್ನು ತುರ್ತಾಗಿ ನೀಡಬೇಕಾಗಿದೆ ಎಂದು ಅವರು ಹೇಳಿದರು.

ಇಸ್ಲಾಮಿನ ಹೆಸರಿನಲ್ಲಿ ಹಿಂಸೆ, ರಕ್ತ ಪಾತ ಹರಿಸುತ್ತಿರುವವರು ತಾವು ನಂಬಿದ ಧರ್ಮದ ಆದರ್ಶಗಳಿಗೆ ದ್ರೋಹ ಬಗೆಯುತ್ತಿದ್ದು ಅವರ ಕುಕೃತ್ಯಗಳಿಗೆ ಇಸ್ಲಾಮನ್ನು ದೂಷಿಸುವುದು ತಪ್ಪು. ವಿನಾಕಾರಣ ಯಾವುದೇ ನಿರಪರಾಧಿ, ಮುಗ್ಧ ವ್ಯಕ್ತಿಯನ್ನು ಕೊಂದರೆ ಇಡೀ ಮಾನವಕುಲವನ್ನೇ ಕೊಂದಂತೆ ಎಂದು ಸಾರುವ ಇಸ್ಲಾಂ,ಒಬ್ಬ ವ್ಯಕ್ತಿಯ ಜೀವ ಉಳಿಸಿದರೂ ಜೀವ ಉಳಿಸಿದ ವ್ಯಕ್ತಿ ಮಾನವ ಕುಲವನ್ನೇ ಉಳಿಸಿದ ಕೀರ್ತಿಗೆ ಪಾತ್ರನಾಗುತ್ತಾನೆ ಎಂದು ಹೇಳಿದ್ದರೆ ಭಯೋತ್ಪಾದನೆಯ ಬಗೆಗಿನ ಇಸ್ಲಾಮ್ ನ ನಿಲುವು ಏನು ಎಂದು ತಿಳಿಯುತ್ತದೆ.  ರಾಜಕೀಯ ಕಾರಣಗಳಿಗಾಗಿ ಭಯೋತ್ಪಾದನೆಯ ಮಾರ್ಗ ಹಿಡಿರುವ ದುರುಳರನ್ನು ಇಸ್ಲಾಮ್ ಯಾವತ್ತೂ ಸಮರ್ಥಿಸದೆ ಒಕ್ಕೊರಲಿನಿಂದ ಖಂಡಿಸಿದೆ ಅನ್ನುವ ವಾಸ್ತವ ಅನಂತ ಕುಮಾರ ಹೆಗಡೆಗೆ ತಿಳಿಯದ್ದು ಆತ ಎಷ್ಟರಮಟ್ಟಿಗೆ ಮೂರ್ಖ ಅನ್ನೋದನ್ನ ಬಿಂಬಿಸುತ್ತದೆ ಎಂದು ಅವರು ಸಮರ್ಥಿಸಿದರು.

ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕಿದ ಬ್ರಿಟಿಷರೆದುರು ಕ್ಷಮೆಯಾಚಿಸಿದ ಸಾವರ್ಕರನ ಚೇಲಾಗಳಿಂದ, ಭಗತ್ ಸಿಂಗ್ ಹೆಸರಿನಲ್ಲಿದ್ದ ವಿಮಾನ ನಿಲ್ದಾಣವೊಂದಕ್ಕೆ ಸಂಘಿಯೊಬ್ಬನ ಹೆಸರಿಟ್ಟಿರುವ RSS ಚೇಲಾ ಅನಂತ ಕುಮಾರ ಹೆಗಡೆಗೆ ಇಸ್ಲಾಂ ಧರ್ಮದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಸುಹೈಲ್ ಕಂದಕ್ ಗುಡುಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News