ತಲಪಾಡಿ ಕೂಲಿಕಾರ್ಮಿಕ ನೇಣುಬಿಗಿದು ಆತ್ಮಹತ್ಯೆ
Update: 2016-02-29 21:47 IST
ಉಳ್ಳಾಲ. ಫೆ, 29: ಕೂಲಿಕಾರ್ಮಿಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಲಪಾಡಿ ವೆಲ್ಡಿಂಗ್ ಅಂಗಡಿಯಲ್ಲಿ ಸೋಮವಾರ ನಸುಕಿನ ಜಾವ ಬೆಳಕಿಗೆ ಬಂದಿದೆ. ರೋಣಾ ಗ್ರಾಮದ ಮಡಿಗೆರೆ ನಿವಾಸಿ ಶಿವಲಿಂಗಪ್ಪ (35) ಆತ್ಮಹತ್ಯೆಗೈದ ಕಾರ್ಮಿಕ. ತಲಪಾಡಿ ಚೆಕ್ ಪೋಸ್ಟ್ ಬಳಿಯಿರುವ ಸತ್ಯೇಂದ್ರ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಆತ್ಮಹತ್ಯೆ ನಡೆದಿದೆ. ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಪರಶುರಾಮ ಮತ್ತು ನಾಗಪ್ಪ ಎಂಬವರ ಸ್ನೇಹಿತನಾಗಿದ್ದ ಶಿವಲಿಂಗಪ್ಪ ಭಾನುವಾರ ತಡರಾತ್ರಿ ಅಂಗಡಿಯಲ್ಲೇ ಕುಳಿತು ಜತೆಯಾಗಿ ಊಟ ಮಾಡಿದ್ದರು. ನಸುಕಿನ ಜಾವ ಶಿವಲಿಂಗಪ್ಪ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪರಶುರಾಮ ಮತ್ತು ನಾಗಪ್ಪ ಇಬ್ಬರು ಮೃತದೇಹವನ್ನು ಕೆಳಗಿಳಿಸಿ ಸಮೀಪದ ಅಂಗನವಾಡಿ ಶಾಲೆ ಬಳಿ ಇರಿಸಿದ್ದರು. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.