×
Ad

ಮಾ.6: ದಂತ ಆರೋಗ್ಯ ಜಾಗೃತಿ ಕಾರ್ಯಕ್ರಮ

Update: 2016-02-29 23:54 IST

ಮಂಗಳೂರು, ಫೆ.29: ಇಂಡಿಯನ್ ಡೆಂಟಲ್ ಅಸೋಸಿಯೇಶನ್‌ನ ದಕ್ಷಿಣ ಕನ್ನಡ ಶಾಖೆಯು ಮಾ.6ರಂದು ವಿಶ್ವ ದಂತ ವೈದ್ಯರ ದಿನಾಚರಣೆ ಆಂಗವಾಗಿ ಸಿಟಿ ಸೆಂಟರ್ ಮಾಲ್ ಮತ್ತು  ಫೋರಂ ಫಿಝಾ ಮಾಲ್‌ನಲ್ಲಿ ದಂತ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ ಎಂದು ಐಡಿಎ ಜಿಲ್ಲಾಧ್ಯಕ್ಷ ಡಾ.ಶಿಶಿರ್ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಇದೇ ವೇಳೆ ‘ಸೆಲ್ಫಿ ಯುವರ್ ಸ್ಮೈಲ್’ ಸ್ಪರ್ಧೆ ಆಯೋಜಿಸಿದ್ದು, ಸಾರ್ವಜನಿಕರು ತಮ್ಮ ೆಟೊ ತೆಗೆದು ಜಿಞಞಜ್ಝಿಛಿಃಟಟ.್ಚಟಞಗೆ ಮಾ.1ರಿಂದ ಮಾ.5ರೊಳಗೆ ಕಳುಹಿಸಬೇಕು. ಮಾ.6ರಂದು ಎರಡೂ ಮಾಲ್‌ಗಳಲ್ಲಿ ಹಾಕುವ ವೇದಿಕೆಯಲ್ಲಿ ನಿಂತು ಸೆಲ್ಫೀ ೆಟೊ ತೆಗೆದು ಇಮೇಲ್ ಮಾಡಲು ಅವಕಾಶವಿದೆ. ವಿಜೇತರಿಗೆ ನಗದು ಹಾಗೂ ಗ್‌ಟಿ ವೋಚರ್‌ನೊಂದಿಗೆ ‘ಐಡಿಎ- ಡಿಕೆ ಬೆಸ್ಟ್ ಸ್ಮೈಲ್ ಅವಾರ್ಡ್’ ನೀಡಲಾಗುವುದು ಎಂದರು.
ಐಡಿಎ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಕೆ.ನಿಲನ್ ಶೆಟ್ಟಿ, ಡಾ.ಶುಭನ್ ಆಳ್ವ, ಡೆಂಟಲ್ ಕೌನ್ಸಿಲ್ ಆ್ ಇಂಡಿಯಾ ಸದಸ್ಯ ಡಾ.ಶಿವಶರಣ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News