×
Ad

ಶಾರ್ಜಾ: ಝಡ್‌ಒ, ಎಂಒ ಆಪ್ಟಿಕಲ್ ಔಟ್‌ಲೆಟ್ ಉದ್ಘಾಟನೆ

Update: 2016-02-29 23:54 IST

ಮಂಗಳೂರು,ಫೆ.29: ತುಂಬೆ ಸಮೂಹ ಸಂಸ್ಥೆಗಳ ಹೆಲ್ತ್‌ಕೇರ್ ವಿಭಾಗ ತನ್ನ ಜಾಲವನ್ನು ವಿಸ್ತರಿಸಿದ್ದು, ‘ಸ್ಟೇಟ್ ಆಫ್ ದ ಆರ್ಟ್’ ಫ್ಯಾಮಿಲಿ ಕ್ಲಿನಿಕ್ ಮತ್ತು ಫಾರ್ಮಸಿ ಯೋಜನೆಯ ತುಂಬೆ ಝಡ್‌ಒ, ಎಂಒ ಆಪ್ಟಿಕಲ್ ಔಟ್‌ಲೆಟ್ ಇತ್ತೀಚೆಗೆ ಶಾರ್ಜಾದಲ್ಲಿ ಉದ್ಘಾಟನೆಗೊಂಡಿದೆ. ಜೊತೆಗೆ ತುಂಬೆ ಸಮೂಹ ಸಂಸ್ಥೆಯ ರಿಟೇಲ್ ಔಟ್‌ಲೆಟ್‌ನ್ನೂ ಆರಂಭಿಸಲಾಗಿದೆ.
 ಉದ್ಘಾಟನಾ ಸಮಾರಂಭದಲ್ಲಿ ತುಂಬೆ ಸಮೂಹ ಸಂಸ್ಥೆಯ ಸ್ಥಾಪಕಾಧ್ಯಕ್ಷ ತುಂಬೆ ಮೊಯ್ದಿನ್, ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಪ್ರೊ.ಗೀತಾ ಅಶೋಕ್ ರಾಜ್, ತುಂಬೆ ಸಮೂಹ ಸಂಸ್ಥೆಯ ಹೆಲ್ತ್ ಕೇರ್ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ, ತುಂಬೆ ಸಮೂಹ ಸಂಸ್ಥೆಗಳ ಕನ್‌ಸ್ಟ್ರಕ್ಷನ್, ರಿನೋವೇಶನ್ ವಿಭಾಗದ ನಿರ್ದೇಶಕ ಅಕ್ರಮ್ ಮೊಯ್ದಿನ್ ಮತ್ತಿತರರು ಉಪಸ್ಥಿತರಿದ್ದರು.

ನೂತನ ಕ್ಲಿನಿಕ್ ಮತ್ತು ಫಾರ್ಮಸಿಯು ಸಂಪೂರ್ಣ ಲ್ಯಾಬೋರೇಟರಿ ಸರ್ವಿಸ್, ಮೆಡಿಕಲ್ ಸಲಕರಣೆಗಳು, ಪುನಶ್ಚೇತನ ಬಳಕೆಯ ವೈದ್ಯಕೀಯ ಸಾಮಗ್ರಿಗಳನ್ನು ಒಳಗೊಂಡಿದೆ. ಅಂತಾರಾಷ್ಟ್ರೀಯ ದರ್ಜೆಯ ಕನ್ನಡಕಗಳ ಸಂಗ್ರಹಗಳು ಆಪ್ಟಿಕಲ್ ಔಟ್‌ಲೆಟ್‌ನಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News