×
Ad

ಉಪೇಂದ್ರ ಕಾಮತ್, ಗೋಪಾಡ್ಕರ್‌ರಿಗೆ ಅಂಜನಾದ್ರಿ ಪುರಸ್ಕಾರ

Update: 2016-02-29 23:56 IST

ಸುಳ್ಯ, ಫೆ.29: ಜಾಲ್ಸೂರು ಗ್ರಾಮದ ಅಡ್ಕಾರು ಮಾಯಿಲಕೋಟೆ ಅಂಜನಾದ್ರಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಹಾಗೂ ಗುಳಿಗ ರಾಜ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ, ಸಾಮಾಜಿಕ, ಶಿಕ್ಷಣ ಹಾಗೂ ಕಲಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮಂಗಳೂರು ಸ್ವರೂಪ ಶಿಕ್ಷಣ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಹಾಗೂ ಉದ್ಯಮಿ ಉಪೇಂದ್ರ ಕಾಮತ್‌ರವರಿಗೆ ‘ಅಂಜನಾದ್ರಿ ಪುರಸ್ಕಾರ-2016’ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಮ್ಯಾನ್ಮಾರ್ ಗಡಿಯಲ್ಲಿ ಉಗ್ರರನ್ನು ಸದೆಬಡಿದ ತಂಡದಲ್ಲಿದ್ದ ಮಂಡೆಕೋಲಿನ ಯೋಧ ರಘುಪತಿ ದಂಪತಿಯನ್ನು ಸನ್ಮಾನಿಸಲಾಯಿತು.
ಶ್ರೀ ಕ್ಷೇತ್ರದಲ್ಲಿ ಹೊಸದಾಗಿ ನಿರ್ಮಾ ಣಗೊಂಡಿರುವ ಶಾಶ್ವತ ಚಪ್ಪರವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಅಕಾಡಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಾ. ಕೆ.ವಿ.ಚಿದಾನಂದ ಅತಿಥಿಗಳಾಗಿದ್ದರು.

 ಗುಜರಾತ್‌ನಲ್ಲಿ ಉದ್ಯಮಿಯಾಗಿರುವ ಜಾಲ್ಸೂರಿನ ಆರ್.ಕೆ.ನಾಯರ್, ಪಿಡಬ್ಲುಡಿ ಗುತ್ತಿಗೆದಾರ, ಉದ್ಯಮಿ ಗೋಪಾಲಕೃಷ್ಣ ಕರೋಡಿ, ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್, ಜಾಲ್ಸೂರು ತಾಪಂ ಸದಸ್ಯ ತೀರ್ಥರಾಮ ಜಾಲ್ಸೂರು, ಜಾಲ್ಸೂರು ಗ್ರಾಪಂ ಅಧ್ಯಕ್ಷೆ ಶಶಿಕಲಾ ನಾಯಕ್, ಉಪಾಧ್ಯಕ್ಷದಿನೇಶ್ ನಾಯಕ್ ಅಡ್ಕಾರು, ಸದಸ್ಯ ಎ.ಆರ್.ಬಾಬು ಅಡ್ಕಾರು, ಆಡಳಿತ ಮಂಡಳಿ ಗೌರವಾಧ್ಯಕ್ಷ ಶಿವರಾಮ ರೈ ಕುರಿಯಗುತ್ತು, ಅಧ್ಯಕ್ಷ ದಯಾನಂದ ರೈ ಡಿಂಬ್ರಿಗುತ್ತು, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಸುಲೋಚನಾ ನಾಯಕ್, ಅಧ್ಯಕ್ಷೆ ಸನ್ನುತಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News