ಭಿನ್ನ ಚೇತನರಿಗೆ ಪ್ರಮಾಣ ಪತ್ರ ವಿತರಣೆ
Update: 2016-02-29 23:58 IST
ಕುಂಜಜತ್ತೂರು, ಫೆ.29: ವೈದ್ಯಕೀಯ ತಪಾಸಣೆಯಲ್ಲಿ ಅಂಗೀಕರಿಸಲಾದ ಗ್ರಾಮ 1,400 ಭಿನ್ನಚೇತನರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಕುಂಜತ್ತೂರು ಜಿಎಲ್ಪಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಗ್ರಾಪಂ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಉದ್ಘಾಟಿಸಿದರು. ಬ್ಲಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮುಸ್ತಫ ಉದ್ಯಾವರ ಅಧ್ಯಕ್ಷತೆ ವಹಿಸಿದ್ದರು. ಭಿನ್ನ ಚೇತನ ಸಂಘಟನೆಯ ಅಧ್ಯಕ್ಷ ಮೊಯ್ದಿನ್ ಕುಟ್ಟಿ, ಅರಫಾತ್, ಪಂಚಾಯತ್ ಸದಸ್ಯೆ ಅಲೀಮಾ ಮತ್ತಿತರರು ಉಪಸ್ಥಿತರಿದ್ದರು.