×
Ad

ಮಾ.21ರಿಂದ ಮರುಸಾಗರ ಎಕ್ಸ್‌ಪ್ರೆಸ್ ರೈಲಿಗೆ ಬೈಂದೂರಿನಲ್ಲಿ ನಿಲುಗಡೆ

Update: 2016-03-01 23:46 IST

ಉಡುಪಿ, ಮಾ.1: ಮಾ.21ರಿಂದ ಆರಂಭಿಸಿ ಆರು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಎರ್ನಾಕುಲಂ-ಅಜ್ಮೀರ್-ಎರ್ನಾಕುಲಂ ನಡುವೆ ಸಂಚರಿಸುವ ಮರುಸಾಗರ ಎಕ್ಸ್‌ಪ್ರೆಸ್ ರೈಲಿಗೆ ಮೂಕಾಂಬಿಕಾ ರೋಡ್ ಬೈಂದೂರು ರೈಲು ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲುಗಡೆ ನೀಡಲು ಕೊಂಕಣ ರೈಲು ನಿಗಮ ನಿರ್ಧರಿಸಿದೆ.
ಈ ರೈಲು ಸಂಜೆ 4:16ಕ್ಕೆ ಬೈಂದೂರು ನಿಲ್ದಾಣಕ್ಕೆ ಆಗಮಿಸಲಿದ್ದು, 4:18ಕ್ಕೆ ಅಲ್ಲಿಂದ ತೆರಳಲಿದೆ. ಅದೇ ರೀತಿ ಮರು ಪ್ರಯಾಣದಲ್ಲಿ ಬೆಳಗ್ಗೆ 7:16ಕ್ಕೆ ಆಗಮಿಸುವ ರೈಲು 7:18ಕ್ಕೆ ಮುಂದಕ್ಕೆ ಪ್ರಯಾಣಿಸಲಿದೆ ಎಂದು ಕೊಂಕಣ ರೈಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News