×
Ad

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಟೈಲರ್‌ಗಳ ಧರಣಿ

Update: 2016-03-01 23:47 IST

ಉಡುಪಿ, ಮಾ.1: ರಾಷ್ಟ್ರೀಯ ಪಿಂಚಣಿ ಯೋಜನೆ ಸ್ಥಗಿತಗೊಳಿಸಬಾರದು ಎಂಬುದು ಸೇರಿ ದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಟೈಲರ್ಸ್‌ ಅಸೋಸಿ ಯೇಶನ್ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂರಾರು ಟೈಲರ್‌ಗಳು ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.
40-60 ವರ್ಷ ವಯೋಮಾನದ ಅಸಂಘಟಿತ ಕಾರ್ಮಿಕರಿಗೆ ಎನ್‌ಪಿಎಸ್ ಲೈಟ್ ಸ್ವಾವಲಂಬನಾ ಯೋಜನೆಯನ್ನು ಈ ಹಿಂದಿನಂತೆ ಮುಂದುವರಿಸಬೇಕು. 18-40 ವರ್ಷ ವಯೋ ಮಾನದವರನ್ನು ಅಟಲ್ ಪಿಂಚಣಿ ಯೋಜನೆಗೆ ವರ್ಗಾವಣೆ ಮಾಡದೆ ಎನ್‌ಪಿಎಸ್ ಲೈಟ್‌ನಲ್ಲೇ ಮುಂದುವರಿಸಬೇಕು. ಇದರಲ್ಲಿ ನಿವೃತ್ತಿ ವೇತನವನ್ನು ಖಾತರಿಪಡಿಸಬೇಕು. ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆಯನ್ನು ಮತ್ತು ಆಮ್ ಆದ್ಮಿ ಬಿಮಾ ಯೋಜನೆಯನ್ನು ಎಲ್ಲ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬದ ಅಸಂಘಟಿತ ಕಾರ್ಮಿಕರಿಗೆ ನೀಡಬೇಕು ಎಂದು ಜಿಲ್ಲಾಧ್ಯಕ್ಷ ವಿಲಿಯಂ ಮಚಾದೊ ಆಗ್ರಹಿಸಿದರು.
ಈವರೆಗೆ ಹಣ ಸಂದಾಯ ಮಾಡಿದ 60 ವರ್ಷ ತುಂಬಿದ ಎಲ್ಲ ಎನ್‌ಪಿಎಸ್ ಫಲಾನುಭವಿಗಳಿಗೆ ನಿವೃತ್ತಿ ಘೋಷಣೆ ಮಾಡಿ ವೇತನ ನೀಡಬೇಕು. ಹೊಲಿಗೆ ಕೆಲಸಗಾರರ ಹೆಣ್ಣು ಮಕ್ಕಳಿಗೆ ವಿವಾಹಧನ ಮತ್ತು ಹೆರಿಗೆ ಭತ್ತೆಯನ್ನು ನೀಡಬೇಕು. ಟೈಲರ್‌ಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಮನೆ ನಿರ್ಮಾಣಕ್ಕೆ ಸಹಾಯಧನ ಮತ್ತು ಕಡಿಮೆ ಬಡ್ಡಿಯಲ್ಲಿ ಸಾಲ ನೀಡಬೇಕು. ಟೈಲರ್‌ಗಳು ಆಕಸ್ಮಿಕವಾಗಿ ಮೃತ ಪಟ್ಟರೆ 2.50 ಲಕ್ಷ ರೂ. ಪರಿಹಾರಧನವನ್ನು ಕುಟುಂಬಕ್ಕೆ ನೀಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಧರಣಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯುಗಾನಂದ ಶೆಟ್ಟಿ, ಕೋಶಾಧಿಕಾರಿ ಕೆ.ರಾಮಚಂದ್ರ, ರಾಜ್ಯ ಉಪಾಧ್ಯಕ್ಷ ಅಬ್ದುಲ್ ಖಾದರ್, ಗುರುರಾಜ್ ಶೆಟ್ಟಿ, ಬಂಡಿಮಠ ಶಿವರಾಮ ಆಚಾರ್ಯ, ವಿಠಲ ಶೆಟ್ಟಿ, ಎಸ್. ಬಿ.ಸೋನ್ಸ್, ರಾಮಕೃಷ್ಣ ನಾಯಕ್, ಶಾರದಾ ಆಚಾರ್, ದಯಾನಂದ ಕೋಟ್ಯಾನ್, ಲಲಿತಾ ಎಸ್.ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸ ಲಾಯಿತು. ಇದಕ್ಕೂ ಮುನ್ನ ಮಣಿಪಾಲ ಸಿಂಡಿ ಕೇಟ್ ಸರ್ಕಲ್‌ನಿಂದ ಸಾವಿರಾರು ಟೈಲರ್‌ಗಳು ಪ್ರತಿಭಟನಾ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News