×
Ad

‘ಟಿಡಿಎಫ್’ನಿಂದ ಸ್ವರ್ಣ-ವಜ್ರಾಭರಣಗಳ ಪ್ರದರ್ಶನ ಆರಂಭ

Update: 2016-03-01 23:51 IST

ಉಡುಪಿ, ಮಾ.1: ವಿಶೇಷ ಹಾಗೂ ಸೊಗಸಾದ ಚಿನ್ನ ಹಾಗೂ ವಜ್ರಗಳ ವಿನ್ಯಾಸ ಭರಿತ ಆಭರಣಗಳಿಗೆ ಹೆಸರು ವಾಸಿಯಾಗಿರುವ ಮುಂಬೈಯ ‘ಟಿಡಿಎಫ್ ಡೈಮಂಡ್ ಫ್ಯಾಕ್ಟರಿ’ಯ ಮದುವಣಗಿತ್ತಿ ವಿಶೇಷ ಸ್ವರ್ಣ-ವಜ್ರಾ ಭರಣಗಳ ಪ್ರದರ್ಶನವು ಉಡುಪಿಯ ಕಿದಿಯೂರು ಹೊಟೇಲಿನ ಮಹಾ ಜನ ಹಾಲ್‌ನಲ್ಲಿ ಇಂದಿನಿಂದ ಆರಂಭ ಗೊಂಡಿದೆ.

‘ಮುಂಬೈಯ ಶೈಲಿ... ದಕ್ಷಿಣ ಭಾರ ತದ ಗುಣಮಟ್ಟ’ ಎಂಬ ಶೀರ್ಷಿಕೆ ಯಡಿ ನಡೆಯುತ್ತಿರುವ ಪ್ರದರ್ಶನ ದಲ್ಲಿ ಟಿಡಿಎಫ್- ಚಿನ್ನ ಮತ್ತು ವಜ್ರಾಭರಣ ಗಳು ತಮ್ಮ ನಾಲ್ಕು ಖ್ಯಾತ ಸಬ್ ಬ್ರಾಂಡ್‌ಗಳೊಂದಿಗೆ ಪ್ರದರ್ಶನಗೊಳ್ಳು ತ್ತಿವೆ. ಮಾ.2ರಂದು ಕೂಡ ನಡೆಯಲಿ ರುವ ಈ ಪ್ರದರ್ಶನಕ್ಕೆ ಮೊದಲ ದಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದೆ.
ನಿತ್ಯ ಬಳಕೆಯ ಕಡಿಮೆ ತೂಕದ ಆಭರಣಗಳಾದ ರೊಝಾನಾ, ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ನಕ್ಷಿ ಟೆಂಪಲ್ ಗೋಲ್ಡ್ ಜ್ಯುವೆಲ್ಲರಿ ಮತ್ತು ಅನ್‌ಕಟ್ ಡೈಮಂಡ್ ಜಾದೂ ಜ್ಯುವೆಲ್ಲರಿಗಳು ನಮ್ಮ ದೇಶದ ಶ್ರೀಮಂತ, ಅಪರೂಪದ ಹಾಗೂ ರಾಯಲ್ ಸಂಸ್ಕೃತಿಯನ್ನು ಪ್ರತಿಬಿಂಬಿ ಸುವ ರೋಯಲ್ ಹೆರಿಟೇಜ್, ನಿಶ್ಚಿತಾರ್ಥ ಸಂಭ್ರಮದಿಂದ ಹಿಡಿದು ಮದುವೆ ಹಾಗೂ ಇತರ ಶುಭ ಸಂದರ್ಭಗಳಲ್ಲಿ ಧರಿಸಬಹುದಾದ ಆಲಂಕಾರಿಕ ಚಿನ್ನ ಮತ್ತು ವಜ್ರದ ಆಭರಣಗಳ ಸಂಗ್ರಹ ಶುಭ ಸಂದ ರ್ಭದ ಸಂತಸವನ್ನು ಇಮ್ಮಡಿಗೊಳಿಸ ಲಿರುವ ‘ಶುಭ್’, ಸೃಜನಶೀಲ ವಿನ್ಯಾಸ ಗಳಿಂದ ಕೂಡಿದ ಅಸಾಧಾರಣ ಮತ್ತು ಕಲಾತ್ಮಕ ಆಭರಣಗಳ ಸಂಗ್ರಹವಾಗಿರುವ ‘ತಮನ್ನಾ’ ಪ್ರದರ್ಶನಗೊಳ್ಳುತ್ತಿದೆ.

ವಜ್ರ ಮತ್ತು ಚಿನ್ನದ ಆಭರಣಗಳ ರಿಟೇಲ್ ಸಮೂಹವನ್ನು ಹೊಂದಿರುವ ಟಿಡಿಎಫ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯು ಬಾಂದ್ರಾ, ಅಂಧೇರಿ ಮತ್ತು ವಶಿಯಲ್ಲಿ ರಿಟೇಲ್ ಔಟ್‌ಲೆಟ್‌ಗಳನ್ನು ಹೊಂದಿದೆ. ಟಿಡಿಎಫ್ ನೀವು ಹೊಸ ಚಿನ್ನ ಖರೀದಿಯ ವೇಳೆ ನಿಮ್ಮ ಹಳೆಯ ಚಿನ್ನಕ್ಕೆ ಸಂಪೂರ್ಣ ವೌಲ್ಯವನ್ನು ನೀಡಲಿದೆ. ಮಾತ್ರವಲ್ಲದೆ ಗ್ರಾಹಕರು ಮಾಸಿಕ ಆಕರ್ಷಕ ‘ಬಂಧನ’ ಯೋಜನೆಯಡಿ ತಮ್ಮನ್ನು ತೊಡಗಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ಗ್ರಾಹಕರು ತಮ್ಮ ಆಸಕ್ತಿ ಹಾಗೂ ಅಭಿರುಚಿಯ ಸ್ವರ್ಣ ಹಾಗೂ ವಜ್ರಾ ಭರಣಗಳ ವಿಶೇಷ ಮುನ್ನೋಟಕ್ಕಾಗಿ ಬುಕ್ಕಿಂಗ್‌ಗಾಗಿ ಮೊ:9920288089 ಯನ್ನು ಸಂಪರ್ಕಿಸಬಹುದು.


ಇಂದು ಪ್ರದರ್ಶನ


ಮುಂಬೈಯ ಟಿಡಿಎಫ್ ಡೈಮಂಡ್ ಫ್ಯಾಕ್ಟರಿಯ ಮದುವಣಗಿತ್ತಿ ವಿಶೇಷ ಆಭರಣಗಳ ವಿನೂತನ ಸಂಗ್ರಹ ಗಳ ಪ್ರದರ್ಶನವು ಉಡುಪಿಯ ಕಿದಿ ಯೂರು ಹೊಟೇಲಿನ ಮಹಾಜನ ಹಾಲ್‌ನಲ್ಲಿ ಮಾ.2ರಂದೂ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News