×
Ad

ಪುತ್ತೂರು ನಗರಸಭೆ: 59.89 ಲಕ್ಷ ರೂ. ಮಿಗತೆ ಬಜೆಟ್ ಮಂಡನೆ

Update: 2016-03-01 23:52 IST

ಪುತ್ತೂರು, ಮಾ.1: ಹೊಸ ಭರವಸೆಗಳ ಸುರಿಮಳೆಯಿಲ್ಲದೆ ಸೋಮವಾರ ಪುತ್ತೂರು ನಗರಸಭೆಯ ಬಜೆಟ್ ಮಂಡಿಸಲಾಯಿತು. 2016-17ನೆ ಸಾಲಿನ ಮುಂಗಡ ಪತ್ರದಲ್ಲಿ 26,40,17,995 ರೂ. ಅನು ದಾನದ ನಿರೀಕ್ಷೆ ಇದೆ. ವಿವಿಧ ಯೋಜನೆ ಹಾಗೂ ಅಗತ್ಯಗಳಿಗೆ 25,80,28,400 ರೂ. ಹಂಚಿಕೆ ಮಾಡಲಾಗಿದೆ. 59,89,595 ರೂ.ನ ಮಿಗತೆ ಬಜೆಟ್ ಮಂಡನೆಯಾಗಿದ್ದು, ವಿಪಕ್ಷ ಸೇರಿದಂತೆ ಸರ್ವ ಸದಸ್ಯರು ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಂಜೂರಾತಿ ನೀಡಿದರು.

ಪುತ್ತೂರು ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷ ಜೀವಂಧರ್ ಜೈನ್ ಬಜೆಟ್ ಮಂಡಿಸಿದರು.


ನಗರಸಭೆ ಆದಾಯ, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ವಿಶೇಷ ಅನುದಾನ ಸೇರಿದಂತೆ ಒಟ್ಟು 26,40,17,995 ರೂ. ಅದಾಯ ನಿರೀಕ್ಷಿಸ ಲಾಗಿದೆ. ನಗರಸಭೆಯ ಸ್ವಂತ ಆದಾಯ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ಪರವಾನಿಗೆ ಶುಲ್ಕ, ಅಂಗಡಿ ಬಾಡಿಗೆ ಮತ್ತು ಮಾರು ಕಟ್ಟೆ ಮೊದಲಾದವುಗಳಿಂದ 6,87,00, 000 ರೂ. ನಿರೀಕ್ಷಿಸಲಾಗಿದೆ. ರಾಜ್ಯ ಸರಕಾರದ ಯೋಜನೇತರ ಅನುದಾನ ಗಳಾದ ವೇತನ ಅನುದಾನ, ನೀರು ಸರಬರಾಜು ವಿದ್ಯುತ್ ಅನುದಾನದಿಂದ 6,83,00,000 ರೂ., ಕೇಂದ್ರ ಸರಕಾರ ದಿಂದ 14ನೆ ಹಣಕಾಸು ಯೋಜನೆಯಡಿ ಯಲ್ಲಿ ಹಾಗೂ ರಾಜ್ಯ ಸರಕಾರದ ಹಣಕಾಸು ಆಯೋಗದ ಅಡಿಯಲ್ಲಿ 9,71,16,000 ರೂ. ಬರಲಿದೆ. ಈ ಎಲ್ಲ ಅನುದಾನಗಳ ಜೊತೆಗೆ ಹೊಸ ಆರ್ಥಿಕ ವರ್ಷದ ಆರಂಭದ ಶಿಲ್ಕು 3,99,01,995 ರೂ. ಸೇರ್ಪಡೆ ಯಾಗುತ್ತದೆ ಎಂದರು.

ಬಜೆಟ್ ಬಗೆಗಿನ ಚರ್ಚೆಯಲ್ಲಿ ವಿಪಕ್ಷ ನಾಯಕ ಎಚ್.ಮುಹಮ್ಮದಲಿ ಮಾತನಾಡಿ, ಆಸ್ತಿ ತೆರಿಗೆಯ 2.5 ಕೋಟಿ ರೂ. ಕಡಿಮೆಯಾಗಿದೆ. ಸಮರ್ಪಕ ವಸೂಲಿ ಮಾಡಿದರೆ ಹೆಚ್ಚು ಆದಾಯ ನಿರೀಕ್ಷಿಸಬಹುದು. ನಗರಸಭೆ ವ್ಯಾಪ್ತಿಯ ಫಲಕ, ಹೋರ್ಡಿಂಗ್, ಇನ್ನಿತರ ಜಾಹೀರಾತುಗಳನ್ನು ಸಮರ್ಪಕವಾಗಿ ಮಾಡಿದರೆ 30 ಲಕ್ಷ ರೂ. ಸಂಪಾದಿಸ ಬಹುದು. ಆದರೆ ನಗರಸಭೆ ಕೇವಲ 3 ಲಕ್ಷ ರೂ.ಗೆ ಸೀಮಿತವಾಗಿದೆ. ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಕೌನ್ಸಿಲರ್‌ಗೆ ತಲಾ 10 ಲಕ್ಷ ರೂ.ನಂತೆ ಅನುದಾನ ವಿಂಗಡಿಸಿದ್ದು, ನಗರಸಭೆಯ ಆದಾಯವನ್ನು ಹೆಚ್ಚುಗೊಳಿಸಿ ಹೆಚ್ಚುವರಿ ಅನುದಾನವನ್ನು ಪಡೆಯಬಹುದು. ಹೊಸ ಭರವಸೆ ನೀಡದೆ, ಚೊಕ್ಕದಾದ ಬಜೆಟ್ ನೀಡಿರುವುದು ಶ್ಲಾಘನೀಯ ಎಂದರು. ಸದಸ್ಯರಾದ ರಾಜೇಶ್ ಬನ್ನೂರು, ಅನ್ವರ್ ಕಾಸಿಂ, ವಿನಯ ಂಡಾರಿ ಮತ್ತಿತರ ಸದಸ್ಯರು ಬಜೆಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸದಸ್ಯರಾದ ವಿನಯ ಭಂಡಾರಿ, ಕೆ.ಸೋಮಪ್ಪ ಸಫಲ್ಯ, ಹರೀಶ್ ನಾಕ್, ವಿಶ್ವನಾಥ ಗೌಡ, ಶಕ್ತಿ ಸಿನ್ಹ, ವಾಣಿಶ್ರೀಧರ್, ಸುಜೀಂದ್ರ ಪ್ರಭು, ಯಶೋದಾ ಹರೀಶ್, ಜೆಸಿಂತಾ ಹಿಲರಿ ಮಸ್ಕರೇನಸ್, ಸೀಮಾ ಗಂಗಾಧರ್, ರೇಖಾ ಯಶೋಧರ, ನವೀನ್‌ಚಂದ್ರ ನಾಯಕ್, ಮುಖೇಶ್ ಕೆಮ್ಮಿಂಜೆ, ಜಯಂತಿ, ನಾಮನಿರ್ದೇಶಿತ ಸದಸ್ಯ ಜೋಕಿಂ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಪೌರಾಯುಕ್ತೆ ರೇಖಾ ಜೆ. ಶೆಟ್ಟಿ ಸ್ವಾಗತಿಸಿ, ವಂದಿಸಿದರು.

ಮೂಲ ಸೌಕರ್ಯ: ಬಜೆಟ್‌ನಲ್ಲಿ ಮೂಲಸೌಕರ್ಯಗಳಾದ ಕುಡಿಯುವ ನೀರು, ರಸ್ತೆಗಾಗಿ ಹಣ ಮೀಸಲಿಡಲಾಗಿದೆ. ನೀರು ಸರಬರಾಜಿಗಾಗಿ ವಾರ್ಡ್‌ಗೆ ತಲಾ 1 ಲಕ್ಷ ರೂ.ನಂತೆ 27 ಲಕ್ಷ ರೂ. ನೀಡಲಾಗಿದೆ. ನೀರು ಸರಬರಾಜಿನ ಸಾಮಗ್ರಿಗಾಗಿ 59 ಲಕ್ಷ ರೂ. ಕಾದಿರಿಸಲಾಗಿದೆ. ನೀರು ಸರಬ ರಾಜು ಹೊರಗುತ್ತಿಗೆ ಕಾರ್ಯನಿರ್ವಹಣೆಗೆ 48.50 ಲಕ್ಷ ರೂ. ಇಡಲಾಗಿದೆ. ವಾಹನದಟ್ಟಣೆ ಸಮಸ್ಯೆ ನಿವಾರಣೆಗೆ ರಸ್ತೆ ಅಗಲೀಕರಣ, ಹೊಸ ರಸ್ತೆ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆಯ ಭೂ ಸ್ವಾಧೀನತೆಗಾಗಿ ಮುಂಗಡ ಪತ್ರದಲ್ಲಿ 2 ಕೋಟಿ ರೂ. ವಿಶೇಷ ಅನುದಾನದ ನಿರೀಕ್ಷೆ ಇಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News