ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಬುಲ್ ಬುಲ್ ವಿಭಾಗಕ್ಕೆ ಗೋಲ್ಡನ್ ಆ್ಯರೋ ಪ್ರಶಸ್ತಿ
Update: 2016-03-01 20:26 IST
ಮಂಗಳೂರು,ಮಾ.1:ಉಪ್ಪಿನಂಗಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಬುಲ್ ಬುಲ್ಸ್ ವಿಭಾಗದ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ದೀಪ್ತಿ ಪ್ರಭು, ಆ್ಯಟ್‌ಶಲ್ ಶೈನಿ ಲೋಬೊ, ಫಾತಿಮಾ ನಿಝ್ನ, ನಿಶಾ ಗೋಯಸ್ ಹಾಗೂ ಇನ್‌ಶ ರಾಷ್ಟ್ರಪತಿ ಪುರಸ್ಕಾರ, ಗೋಲ್ಡನ್ ಆ್ಯರೋ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರು ಬುಲ್ ಬುಲ್ ಶಿಕ್ಷಕಿ ಮರಿಯಾ ಜಾನೆಟ್ ಡಿಸೋಜರವರಿಂದ ತರಬೇತಿ ಹೊಂದಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಗೋಲ್ಡನ್ ಆ್ಯರೋ ರ್ಯಾಲಿ ಪುರಸ್ಕಾರ ಅರ್ಹತಾ ಪರಿಕ್ಷೇಯಲ್ಲಿ ತೇರ್ಗಡೆಗೊಂಡ ಐದು ಮಂದಿ ವಿದ್ಯಾರ್ಥಿಗಳು ಫೆ. 21ರಿಂದ 23ರ ವರೆಗೆ ದೆಹಲಿಯಲ್ಲಿ ನಡೆದ, ಗೋಲ್ಡನ್ ಆ್ಯರೋ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ (ಗೋಲ್ಡನ್ ಆ್ಯರೋ ಅವಾರ್ಡ್ ರ್ಯಾಲಿ) ಭಾಗವಹಿಸಿ , ರಾಷ್ಟ್ರಪತಿ ಪುರಸ್ಕಾರವನ್ನು ಸ್ವೀಕರಿಸಿರುತ್ತಾರೆ ಎಂದು ಶಾಲಾ ಸಂಚಾಲಕರಾದ ವಂ ವಿಕ್ಟರ್ ಡಿಸೋಜರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.