ಪುತ್ತೂರು ತಾಲ್ಲೂಕಿನ ಪಡುಮಲೆ ಶಾಲೆಯಲ್ಲಿ ಮನೆ ಭೇಟಿ ಕಾರ್ಯಕ್ರಮ
ಪುತ್ತೂರು ತಾಲ್ಲೂಕಿನ ಪಡುಮಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ದಿನಗಳ ಮನೆ ಭೇಟಿ ಕಾರ್ಯಕ್ರಮ ಶುಕ್ರವಾರ ನಡೆಯಿತು. ಪಡುಮಲೆ ಶಾಲೆಯಲ್ಲಿ ಮನೆ ಭೇಟಿ ಕಾರ್ಯಕ್ರಮ
ಪುತ್ತೂರು : ನಮ್ಮ ಶಾಲೆ, ನಮ್ಮೂರ ಶಾಲೆ, ನಮ್ಮ ಮಕ್ಕಳು ನಮ್ಮೆಲ್ಲರ ಮಕ್ಕಳು. ನಮ್ಮ ಮಕ್ಕಳನ್ನು ನಮ್ಮ ಶಾಲೆಯಲ್ಲೇ ಓದಿಸೋಣ. ಮಕ್ಕಳ ಶಿಕ್ಷಣದ ಬಲವರ್ಧನೆ ನಮ್ಮೆಲ್ಲರ ಹೊಣೆ ಎಂಬ ಪರಿಕಲ್ಪನೆಯಲ್ಲಿ ಪುತ್ತೂರು ತಾಲ್ಲೂಕಿನ ಪಡುಮಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ದಿನಗಳ ಮನೆ ಭೇಟಿ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಬಡಗನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಗೌಡ ಅವರು ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಗ್ರಾಮ ಪಂಚಾಯಿತಿ ಸದಸ್ಯ ರವಿರಾಜ್‌ರೈ ಸಜಂಕಾಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸುರೇಶ್‌ಕುಮಾರ್ ಪಿ ಮುಖ್ಯ ಅತಿಥಿಯಾಗಿದ್ದರು. ಬಿಆರ್‌ಪಿ ದಿನೇಶ್ ಮಾಚಾರ್, ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷ ಚಂದ್ರಶೇಖರ್ ಪಿ ಸಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಮಾರ್ ಇದ್ದರು. ಶಾಲಾ ಮುಖ್ಯಗುರು ದೇವಿಪ್ರಸಾದ್ ಕೆ ಸಿ ಸ್ವಾಗತಿಸಿದರು. ಸಹ ಶಿಕ್ಷಕಿ ಪರಮೇಶ್ವರಿ ವಂದಿಸಿದರು. ಗೌರವ ಶಿಕ್ಷಕಿ ವಿಲಾಸಿನಿ, ಎಸ್‌ಡಿಎಂಸಿ ಸದಸ್ಯರಾದ ಲಲಿತಾ, ಸುಶೀಲ ಮತ್ತಿತರರು ಸಹಕರಿಸಿದರು. ಗುಳಿಗ ಗುಂಡಿ ನಿವಾಸಿ ದೇವಪ್ಪ ನಾಯ್ಕ ಅವರ ಮನೆಗೆ ತೆರಳಿ, ಶಾಲೆಯಲ್ಲಿದೊರೆಯುವ ಸೌಲಭ್ಯಗಳ ಮಾಹಿತಿ ನೀಡಿ, ವಿದ್ಯಾರ್ಥಿ ಲಕ್ಷ್ಮೀಶನನ್ನು ದಾಖಲು ಮಾಡಿಕೊಳ್ಳುವ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಯಿತು.