×
Ad

ಮಾ. 2 :ಹೆಚ್.ಪಿ.ಸಿ.ಎಲ್ ನಲ್ಲಿ ಅವಘಢಗಳ ತಡೆ ಅಣುಕು ಪ್ರದರ್ಶನ

Update: 2016-03-01 21:30 IST

ಮಂಗಳೂರು,ಮಾ.1: ರಾಸಾಯನಿಕ , ನೈಸರ್ಗಿಕ ಇನ್ನಿತರೆ ಅವಘಢಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ತುರ್ತು ಕಾರ್ಯಗಳ ಬಗ್ಗೆ ಮಂಗಳೂರಿನ ಬಾಳ ಗ್ರಾಮದಲ್ಲಿರುವ ಹೆಚ್.ಪಿ.ಸಿ.ಎಲ್ ಸಂಸ್ಥೆಯ ಆವರಣದಲ್ಲಿ ಮಾ. 2 ರಂದು ಬೆಳಿಗ್ಗೆ 10.30ಕ್ಕೆ ಅಣುಕು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಅವಘಡಗಳ ನಿರ್ವಹಣೆ ಪ್ರಾಧಿಕಾರ ರಾಜ್ಯ ಶಾಖೆಯ ತುರ್ತು ಸಮನ್ವಯಾಧಿಕಾರಿ ಕೆ.ಕೆ. ಪ್ರದೀಪ್ ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಈ ಕುರಿತು ನಡೆದ ಟೇಬಲ್ ಟಾಪ್ ಎಕ್ಸರ್‌ಸೈಸ್ ಸಭೆಯಲ್ಲಿ ತಿಳಿಸಿದರು.
    ಜಿಲ್ಲಾಧಿಕಾರಿ ಎ.ಬಿ ಇಬ್ರಾಹೀಂ ಅವರು ಮಾತನಾಡಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಮಹಾನಗರ ಪಾಲಿಕೆಯಲ್ಲಿ 24*7 ಅವಧಿ ಕಾರ್ಯಾಚರಿಸುತ್ತಿರುವ ಕಂಟ್ರೋಲ್ ರೂಂ ಜಿಲ್ಲೆಯಲ್ಲಿ ಯಾವುದೇ ಅವಘಢಗಳು ಸಂಭಸಿದಲ್ಲಿ ಸಾರ್ವಜನಿಕರು ಇಲ್ಲಿಗೆ ಮಾಹಿತಿಯನ್ನು ನೀಡಬಹುದಾಗಿದೆ ಎಂದು ತಿಳಿಸಿದರು.
   ಮಾ. 2 ರಂದು ನಡೆಯಲಿರುವ ರಾಸಾಯನಿಕ ಅವಘಢಗಳ ನಿರ್ವಹಣೆ ಕುರಿತ ಅಣುಕು ಪ್ರದರ್ಶನದಲ್ಲಿ ವಿವಿಧ ಇಲಾಖೆಗಳ ಕಾರ್ಯಗಳ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News