ಚುಟುಕು ಸುದ್ದಿಗಳು

Update: 2016-03-01 17:36 GMT

ಇಂದು ಅಣಕು ಪ್ರದರ್ಶನ

ಮಂಗಳೂರು, ಮಾ.1: ರಾಸಾಯನಿಕ, ನೈಸರ್ಗಿಕ ಇನ್ನಿತರೆ ಅವಘಡಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ತುರ್ತುಕಾರ್ಯಗಳ ಬಗ್ಗೆ ಮಂಗಳೂರಿನ ಬಾಳ ಗ್ರಾಮದಲ್ಲಿರುವ ಎಚ್‌ಪಿಸಿಎಲ್ ಸಂಸ್ಥೆಯ ಆವರಣದಲ್ಲಿ ಮಾ.2ರಂದು ಬೆಳಗ್ಗೆ 10:30ಕ್ಕೆ ಅಣಕು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಅವಘಡಗಳ ನಿರ್ವಹಣೆ ಪ್ರಾಕಾರ ರಾಜ್ಯ ಶಾಖೆಯ ತುರ್ತು ಸಮನ್ವಯಾಕಾರಿ ಕೆ.ಕೆ. ಪ್ರದೀಪ್ ತಿಳಿಸಿದ್ದಾರೆ.

ಅನಂತ್ ಕುಮಾರ್ ಹೇಳಿಕೆಗೆ ಖಂಡನೆ
ಮಂಗಳೂರು, ಮಾ.1: ಸಂಸದ ಅನಂತ್ ಕುಮಾರ್ ಹೆಗಡೆಯ ಉಗ್ರ ಹೇಳಿಕೆಯನ್ನು ಖಂಡಿಸಿರುವ ಪಿಎ್ಐ ಬಂಟ್ವಾಳ ತಾಲೂಕು ಸಮಿತಿ, ಸಂಸದರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿದೆ. ಅನಂತ ಕುಮಾರ್‌ರ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸುವಂತೆ ಸಮಿತಿ ಅಧ್ಯಕ್ಷ ಝಕರಿಯಾ ಗೊಳ್ತಮಜಲು ಆಗ್ರಹಿಸಿದ್ದಾರೆ. ದ.ಕ.ಜಿಲ್ಲಾ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಐ. ಮೊಯ್ದಿನಬ್ಬ ಹಾಜಿ, ಉಪಾಧ್ಯಕ್ಷರಾದ ಹಾಜಿ ಎಸ್. ಅಬ್ದುಲ್ ಖಾದರ್, ಅಬ್ದುರ್ರಹ್ಮಾನ್ ಆಝಾದ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ರಫೀಕ್ ಕೊಡಾಜೆ, ಕೋಶಾಕಾರಿ ಹಾಜಿ ಶಾಹುಲ್ ಹಮೀದ್, ಪುತ್ತೂರು ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರಿಸ್ ಹನೀಫಿ, ಬೆಳ್ತಂಗಡಿ ಘಟಕದ ಮುಸ್ತಾ ಮುಸ್ಲಿಯಾರ್, ಸುನ್ನಿ ಸಂದೇಶ ಪತ್ರಿಕಾ ಬಳಗದ ಕೆ.ಎಸ್. ಹೈದರ್ ದಾರಿಮಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ನೌಷಾದ್ ಹಾಜಿ, ಮುಸ್ತಾ ೈಝಿ, ಕೆ.ಎಲ್. ಉಮರ್ ದಾರಿಮಿ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಇಬ್ರಾಹೀಂ ಕೊಂಬಂಕುದಿ, ಎಂ.ಎ. ಅಬ್ದುಲ್ಲ ಬೆಳ್ಮ ಖಂಡಿಸಿದ್ದಾರೆ.

ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ
ಉಡುಪಿ, ಮಾ.1: ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆ ವತಿಯಿಂದ ನಾಟ್ಕದೂರಿನಲ್ಲಿ 6ನೆ ವರ್ಷದ ಮುದ್ರಾಡಿ ‘ರಾಷ್ಟ್ರೀಯ ರಂಗೋತ್ಸವ-2016’ ಮಾ7ರವರೆಗೆ ನಡೆಯಲಿದೆ ಎಂದು ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸಂಘಟಕ ಸುಕುಮಾರ್ ಮೋಹನ್ ತಿಳಿಸಿದ್ದಾರೆ.

ನಾಳೆ ಗುರುಪುರ ಯುವಕ ಸಂಘದ ಸ್ವರ್ಣ ಮಹೋತ್ಸವ
ಮಂಗಳೂರು, ಮಾ.1: ಗುರುಪುರ ಯುವಕ ಸಂಘದ ಸುವರ್ಣ ಮಹೋತ್ಸವ ಮಾ.3ರಂದು ಗುರುಪುರ ಸರಕಾರಿ ಪ.ಪೂ. ಕಾಲೇಜಿನ ಗುರುಕೃಪಾ ಕಲಾ ಮಂದಿರದಲ್ಲಿ ಜರಗಲಿದೆ. ಅಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿರುವ ಸುವರ್ಣ ಮಹೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಮೊಯ್ದಿನ್ ಬಾವ ವಹಿಸಲಿದ್ದಾರೆ. ಉದ್ಯಮಿ ರಾಜೇಶ್ ನಾಯ್ಕಾ ಉಳಿಪಾಡಿಗುತ್ತು ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಯುವ ಕಲೋತ್ಸವವನ್ನು ಗಂಜಿಮಠ ರಾಜ್ ಅಕಾಡಮಿಯ ಸಂಚಾಲಕಿ ಮಮತಾ ವೈ. ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಂಜೆ 7ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಾವೂರು ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ವಹಿಸಲಿದ್ದಾರೆ. ಗುರುಪುರ ಸತ್ಯದೇವತಾ ಧರ್ಮದೇವತಾ ಮಂದಿರದ ಚಂದ್ರಕಾಂತ ಭಟ್ ಆಶೀರ್ವಚನ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಬಹುಮಾನ ವಿತರಿಸಲಿದ್ದಾರೆ. ಬಳಿಕ ‘ಆತೇ ಪನೊಡಾತೆ’ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

ಮಾ.4-6: ಪೇರಡ್ಕ ಉರೂಸ್
ಸುಳ್ಯ, ಮಾ.1: ಇಲ್ಲಿನ ಪೇರಡ್ಕ-ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರ್ೀನ ಉರೂಸ್ ಸಮಾರಂಭವು ಮಾ.4,5 ಮತ್ತು 6ರಂದು ಪೇರಡ್ಕ ತೆಕ್ಕಿಲ್ ಮುಹಮ್ಮದ್ ವೇದಿಕೆಯಲ್ಲಿ ನಡೆಯಲಿದೆ. ಮಾ.4ರಂದು ಪೇರಡ್ಕ ಜಮಾಅತ್ ಅಧ್ಯಕ್ಷ ಅಲಿ ಹಾಜಿ ಧ್ವಜಾರೋಹಣಗೈಯಲಿದ್ದು, ಸಂಜೆ ಸ್ಥಳೀಯ ಖತೀಬ್ ಇಬ್ರಾಹೀಂ ಖಲೀಲ್ ೈಝಿ ಉದ್ಘಾಟಿಸಲಿದ್ದಾರೆ. ಪುತ್ತೂರು ಕೂರ್ನಡ್ಕ ಜುಮಾ ಮಸೀದಿಯ ಮುದರ್ರಿಸ್ ಅಬೂಬಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಮಾ.5ರಂದು ನಿಝಾಮುದ್ದೀನ್ ಬಾಖವಿ ಕೊಲ್ಲಂ, ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಾ.6ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಅಲ್ಹಾಜ್ ಅಸೈಯದ್ ಝೈನುಲ್ ಆಬಿದೀನ್ ತಂಳ್ ದುಗ್ಗಲ್ಲಡ್ಕ ದುಆ ನೆರವೇರಿಸಲಿದ್ದಾರೆ. ಹಾಫಿಲ್ ಇ.ಪಿ.ಅಬೂಬಕರ್ ಅಲ್ ಖಾಸಿಮಿ ಪತ್ತನಾಪುರಂ ಉಪನ್ಯಾಸ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನ ಟಿ.ಎಂ. ಶಹೀದ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಹಿರಿಯ ಸಹಕಾರಿ ಧುರೀಣ ನಿತ್ಯಾನಂದ ಮುಂಡೋಡಿ ಉದ್ಘಾಟಿಸಲಿದ್ದಾರೆ. ಮಾ.3ರಂದು ಮಗ್ರಿಬ್ ನಮಾಝ್ ಬಳಿಕ ದರ್ಗಾದಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ಮಾ.7ರಂದು ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ ಶಹೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಾ.6: ದೇವಾಡಿಗ ಮಹಿಳಾ ಸಮ್ಮಿಲನ
ಉಡುಪಿ, ಮಾ.1: ಉಡುಪಿ ದೇವಾಡಿಗ ಯುವ ವೇದಿಕೆಯ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಜಾಗತಿಕ ಮಟ್ಟದ ದೇವಾಡಿಗ ಮಹಿಳಾ ಸಮ್ಮಿಲನವನ್ನು ಮಾ.6ರಂದು ಉಡುಪಿಯ ಶಾರದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಘಟನಾ ಕಾರ್ಯದರ್ಶಿ ಜ್ಯೋತಿ ಪ್ರಶಾಂತ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9:45ಕ್ಕೆ ಕಾರ್ಯಕ್ರಮವು ಉದ್ಘಾಟನೆಗೊಳ್ಳಲಿದ್ದು, ಸಮಾಜದಲ್ಲಿ ಮಹಿಳೆಯ ಪ್ರಾಮುಖ್ಯತೆ ಹಾಗೂ ಅವರ ಅರ್ಥಪೂರ್ಣ ಬದುಕಿಗೆ ಸಂಬಂಸಿದ ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಮಧ್ಯಾಹ್ನದ ಬಳಿಕ ಸಮುದಾಯದ ವೃತ್ತಿಪರ ಮಹಿಳೆಯರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಪರಾಹ್ನ 3:30ಕ್ಕೆ ಸಮಾಜ ಬಾಂಧವರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಾಂಶುಪಾಲ ಆತ್ಮಹತ್ಯೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹ
ಮಂಗಳೂರು, ಮಾ.1: ಮಡಿಕೇರಿ ಮಾದಾಪುರ ಡಿ.ಚೆನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ಸುಧೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯ ವಿಳಂಬ ನೀತಿಯನ್ನು ಖಂಡಿಸಿ ಹಾಗೂ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಕಾರಿ ಕಚೇರಿ ಎದುರು ಧರಣಿ ನಡೆಯಿತು.ಈ ಸಂದರ್ಭ ಮಾತನಾಡಿದ ಜಿಲ್ಲಾ ಸಂಚಾಲಕ ಎಂ.ವಿ. ಪದ್ಮನಾಭ, ದಲಿತ ಜನಾಂಗದ ಮೀಸಲಾತಿಯನ್ನು ಸಹಿಸದ ಮೇಲ್ವರ್ಗದವರು ಪ್ರಾಂಶುಪಾಲ ಸುಧೇಶ್ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಹಾಗಾಗಿ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.ಕರ್ನಾಟಕ ದಲಿತ ನೌಕರರ ಒಕ್ಕೂಟದ ಜಿಲ್ಲಾ ಸಂಚಾಲಕ ಎಚ್.ಡಿ.ಲೋಹಿತ್ ಮಾತನಾಡಿ, ಸುದೇಶ್‌ರ ಸಾವಿಗೆ ಕಾರಣರಾದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರನ್ನು ಕೂಡಲೇ ಬಂಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಧರಣಿಯಲ್ಲಿ ಕರ್ನಾಟಕ ದಸಂಸ ರಾಜ್ಯ ಪದಾಕಾರಿ ಸುಂದರ್ ಉಳ್ಳಾಲ್‌ಶೇಖರ ಹೆಜಮಾಡಿ, ಜೆ.ಶ್ರೀನಿವಾಸುಲು, ಸುಧೇಶ್‌ರ ಪತ್ನಿ ಸ್ನೇಹಲತಾ, ತಾಯಿ ಕಮಲಾ, ಬಿ.ಕೇಶವ, ಆನಂದ ಬೆಳ್ಳಾರೆ, ನಿರ್ಮಲ್ ಕುಮಾರ್ ಉಪಸ್ಥಿತರಿದ್ದರು.

ಮೂಡುಬಿದಿರೆ: 25 ಲಕ್ಷ ರೂ. ಅವ್ಯವಹಾರ ಆರೋಪ
ಮೂಡುಬಿದಿರೆ, ಮಾ.1: ಘನತ್ಯಾಜ್ಯ ನಿರ್ವಹಣೆಯ ಟೆಂಡರ್ ಮೊತ್ತದಲ್ಲೇ ಜಂಗಲ್ ಕಟ್ಟಿಂಗ್ ಮೊತ್ತ ಸೇರಿದ್ದರೂ ಅದಕ್ಕೆ ಪುರಸಭೆಯಿಂದ ಪ್ರತ್ಯೇಕವಾಗಿ ಪಾವತಿಸುವ ಮೂಲಕ ಸುಮಾರು 25 ಲಕ್ಷ ರೂ. ಅವ್ಯವಹಾರ ನಡೆಸಲಾಗಿದೆ ಎಂದು ಪುರಸಭಾ ಸದಸ್ಯ ಹನ್ೀ ಆಲಂಗಾರು ಆರೋಪಿಸಿದ್ದಾರೆ. ಮೂಡುಬಿದಿರೆ ಪುರಸಭೆಯಲ್ಲಿ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿಯ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಘನತ್ಯಾಜ್ಯ ವಿಲೇವಾರಿಗೆ ಸಂಬಂಸಿದಂತೆ 99ಲಕ್ಷ ರೂ.ಗಳ ಇ-ಟೆಂಡರ್‌ನಲ್ಲಿ ಗುತ್ತಿಗೆ ಪಡೆದವರು ಶೇ.10ರಷ್ಟು ಇಎಂಡಿ ಇಡಬೇಕು ಎಂದು ಷರತ್ತನ್ನು ಹಾಕಲಾಗಿದೆ. ಗುತ್ತಿಗೆದಾರರೊಬ್ಬರು ಸರಕಾರಿ ಷರತ್ತನ್ನು ಪುರಸಭೆ ಅಕಾರಗಳಿಗೆ ತಿಳಿಸಿದ ಬಳಿಕ ತಿದ್ದುಪಡಿ ಮಾಡಿ ಮತ್ತೆ ಟೆಂಡರ್ ಕರೆಯುವ ಮೂಲಕ ಸರಕಾರದ ನಿಯಮವನ್ನು ಉಲ್ಲಂಸಿ ಗುತ್ತಿಗೆದಾರರು ಬರದಂತೆ ತಡೆಯಲಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಪರಿಸರ ಇಂಜಿನಿಯರ್ ಶಿಲ್ಪಾ, ಪೌರಾಡಳಿತ ನಿರ್ದೇಶನಾಲಯದ ಅಕಾರಿಗಳಲ್ಲಿ ಚರ್ಚಿಸಿಯೇ ಇ-ಟೆಂಡರ್‌ನಲ್ಲಿ ಶೇ.10 ಠೇವಣಿ ಮೊತ್ತವನ್ನು ನಮೂದಿಸಲಾಗಿದೆ. ಸರಕಾರಿ ಷರತ್ತಿನಲ್ಲಿ ಶೇ.5 ಇರುವುದು ತನಗೆ ಗೊತ್ತಿರಲಿಲ್ಲ ಎಂದು ಉತ್ತರಿಸಿದಾಗ, ಗುತ್ತಿಗೆದಾರಿಗೆ, ಪುರಸಭಾ ಸದಸ್ಯರಿಗೆ ಈ ಬಗ್ಗೆ ಅರಿವಿದ್ದರೂ ಇದನ್ನು ಅನುಷ್ಠಾನಗೊಳಿಸುವ ಅಕಾರಿಗಳಿಗೆ ಅರಿವಿಲ್ಲ ಎಂದರೆ ಹೇಗೆ? ಎಂದು ಹನ್ೀ ತರಾಟೆಗೆ ತೆಗೆದುಕೊಂಡರು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ
ಬೆಳ್ತಂಗಡಿ, ಮಾ.1: ನಗರ ವ್ಯಾಪ್ತಿಯಲ್ಲಿ ಹೊಟೇಲ್‌ಗಳಿಂದ ತ್ಯಾಜ್ಯ ನೀರನ್ನು ಬೇಕಾಬಿಟ್ಟಿಯಾಗಿ ರಸ್ತೆಬದಿಗೆ ಬೀಡುತ್ತಿರುವ ಬಗ್ಗೆ ಕಠಿಣ ಕ್ರಮ, ಬೀದಿ ವ್ಯಾಪಾರಿಗಳ ಹೆಚ್ಚಳದಿಂದ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಆಗುತ್ತಿರುವ ತೊಂದರೆ, ಅಂಗಡಿ ಬಾಡಿಗೆ ಮತ್ತು ಲೈಸೆನ್ಸ್ ಶುಲ್ಕದಲ್ಲಿ ಹೆಚ್ಚಳ, ನೀರಿನ ದರ ಪರಿಷ್ಕರಣೆಯ ಬಗ್ಗೆ ಅಧ್ಯಕ್ಷೆ ನಳಿನಿ ವಿಶ್ವನಾಥ್‌ರ ಅಧ್ಯಕ್ಷತೆಯಲ್ಲಿ ನಡೆದ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು. ಬೆಳ್ತಂಗಡಿ ಪಪಂ ವ್ಯಾಪ್ತಿಯ ಹೊಟೇಲ್, ವಾಣಿಜ್ಯ ಮಳಿಗೆ, ವಾಸ್ತವ್ಯದ ಮನೆಗಳಿಂದ ಹೊರಬಿಡುವಂತಹ ತ್ಯಾಜ್ಯ ನೀರಿನ ಬಗ್ಗೆ ಎಚ್ಚರಿಕೆ ವಹಿಸುವುದು, ರಸ್ತೆ ಬದಿಯ ಚರಂಡಿಗಳಿಗೆ ನೀರು ಬಿಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯಿಸಲಾಯಿತು. ಸಭೆಯಲ್ಲಿ ಮಮತಾ ಶೆಟ್ಟಿ, ಮುಗುಳಿ ನಾರಾಯಣ ರಾವ್ ಜೆಸಿಂತಾ ಲೂವಿಸ್, ವೆಂಕಟರಮಣ ಶರ್ಮ, ಮಹಾವೀರ ಅರಿಗ, ಮಂಜಪ್ಪ ಉಪಸ್ಥಿತರಿದ್ದರು

ಫಿಲೊಮಿನಾ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಪುತ್ತೂರು, ಮಾ.1: ಉಜಿರೆಯ ಎಸ್‌ಡಿಎಮ್ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ ವಿಭಾಗದ ಆಶ್ರಯದಲ್ಲಿ ಜರಗಿದ ‘ಇಕೊ-ಆರ್ಟ್ಸ್ ೆೆಸ್ಟ್-2016’ರಲ್ಲಿ ಭಾಗವಹಿಸಿದ್ದ ಸಂತ ಫಿಲೊಮಿನಾ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ. ಪ್ರಬಂಧ ಸ್ಪರ್ಧೆಯಲ್ಲಿ ಪ್ರಕಾಶ್ ಮೆಲ್ವಿನ್ ಡಿಸೋಜ ಪ್ರಥಮ ಮತ್ತು ದೀಪಿಕಾ ಎಮ್. ದ್ವಿತೀಯ ಸ್ಥಾನ, ಭಾಷಣ ಸ್ಪರ್ಧೆಯಲ್ಲಿ ಅಕ್ಷತಾ ಶರ್ಮ ದ್ವಿತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ದೀಪಿಕಾ ಮತ್ತು ಡೋನಲ್ ತಂಡ ತೃತೀಯ ಸ್ಥಾನ ಗಳಿಸಿದೆ. ಅರ್ಥಶಾಸ ವಿಭಾಗದ ಉಪನ್ಯಾಸಕಿ ಪ್ರೊ. ಹರ್ಷಿತಾ ಪಿವಿ ಸ್ಪರ್ಧಾ ತಂಡವನ್ನು ಸಂಯೋ ಜಿಸಿದರು.

‘ಚೆರುಶ್ಶೆೇರಿ ಉಸ್ತಾದರ ಬದುಕು ಸರ್ವರಿಗೂ ಮಾದರಿ
ಪುತ್ತೂರು, ಮಾ.1: ‘ಸಮಸ್ತ’ ಸಂಘಟನೆ ಮತ್ತು ಇಸ್ಲಾಮಿಕ್ ಯುನಿವರ್ಸಿಟಿಯ ಮುಖ್ಯಸ್ಥರಾಗಿದ್ದುಕೊಂಡು ಸಮಾಜಕ್ಕಾಗಿ ಜೀವನ ಪೂರ್ತಿ ದುಡಿದು ಅಗಲಿದ ಶೈಖುನಾ ಝೈನುಲ್ ಉಲಮಾ ಚೆರುಶ್ಶೇರಿ ಉಸ್ತಾದ್‌ರ ಸಾರ್ಥಕ ಬದುಕು ಸರ್ವರಿಗೂ ಮಾದರಿಯಾಗಿದೆ ಎಂದು ಹಿರಿಯ ವಿದ್ವಾಂಸ ಮೊಯ್ದು ೈಝಿ ಕಲ್ಲೇಗ ಹೇಳಿದ್ದಾರೆ.
ಪುತ್ತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಕಲ್ಲೇಗ ಮದ್ರಸ ಸಭಾಂಗಣದಲ್ಲಿ ಜರಗಿದ ಶೈಖುನಾ ಚೆರುಶ್ಶೆರಿ ಉಸ್ತಾದ್ ಅನುಸ್ಮರಣಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೇಂಜ್ ಅಧ್ಯಕ್ಷ ಆಸ್ಿ ಅಝ್‌ಹರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪುತ್ತೂರು ಎಸ್ಕೆಎಸ್ಸೆಸ್ಸ್ೆ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ ಬೆಳ್ಳಾರೆ, ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ಅಬ್ದುರ್ರಹ್ಮಾನ್ ಆಝಾದ್ ದರ್ಬೆ, ಅಬ್ದುರ್ರಹ್ಮಾನ್ ಮುರ, ಶುಕೂರ್ ಹಾಜಿ ಕಲ್ಲೇಗ, ಮೂಸಾ ಕಲ್ಲೇಗ, ಉಮರ್ ದಾರಿಮಿ ಸಾಲ್ಮರ, ಮುಸ್ತಾ ೈಝಿ ಮತ್ತಿತರರು ಉಪಸ್ಥಿತರಿದ್ದರು. ರೇಂಜ್ ಕಾರ್ಯದರ್ಶಿ ಬಶೀರ್ ದಾರಿಮಿ ಸ್ವಾಗತಿಸಿ, ಯೂಸ್ು ೈಝಿ ವಂದಿಸಿದರು. ಕೆಎಂಎ ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು.

ಮೂರುಗೋಳಿ: ಕಾಲ್ನಡಿಗೆ ಜಾಥಾ
ಉಪ್ಪಿನಂಗಡಿ, ಮಾ.1: ಎಸ್ಸೆಸ್ಸ್ೆ ಮೂರುಗೋಳಿ ಸೆಕ್ಟರ್ ವತಿಯಿಂದ ‘ಭಯೋತ್ಪಾದನೆ ವಿರುದ್ಧ ಜಿಹಾದ್’ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್‌ಬಿಎಸ್ ವಿದ್ಯಾರ್ಥಿಗಳಿಂದ ಕಲ್ಲೇರಿ ಹಾಗೂ ಕುಪೆಟ್ಟಿ ಜುಮಾ ಮಸೀದಿಯಿಂದ ಕಲ್ಲೇರಿ ಜಂಕ್ಷನ್‌ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.
ಎಸ್ಸೆಸ್ಸ್ೆ ಉಪ್ಪಿನಂಗಡಿ ವಲಯಾಧ್ಯಕ್ಷ ಎನ್.ಎಮ್.ಶರ್ೀ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಸುಲೈಮಾನ್ ಸಹದಿ ಅಲ್-ಅಪ್ಳಲಿ ತುರ್ಕಳಿಕೆ ಉದ್ಘಾಟಿಸಿದರು. ಅನ್ಸಾರ್ ಬೇಂಗಿಳ, ಅತಾವುಲ್ಲಾ ಕುಪೆಟ್ಟಿ, ಎಸ್.ಎಸ್. ಬಶೀರ್ ಝುಹ್‌ರಿ ಮೂರುಗೋಳಿ, ಸಿದ್ದೀಕ್ ಸಖಾಫಿ ಸಂದೇಶ ಭಾಷಣಗೈದರು. ಕಾರ್ಯಕ್ರಮದಲ್ಲಿ ಡಿವಿಜನ್ ನಾಯಕರಾದ ಇಲ್ಯಾಸ್ ಲತೀಫಿ, ಕಲಂದರ್ ಪದ್ಮುಂಜ, ಸೆಕ್ಟರ್ ನಾಯಕರಾದ ಇಸಾಕ್ ಮದನಿ, ಶರ್ೀ ಮದನಿ, ಹಾರೀಸ್ ಬೇಂಗಿಳ, ಅಬ್ದುರ್ರಹ್ಮಾನ್ ಪದ್ಮುಂಜ, ಹಂಝ ಪದ್ಮುಂಜ, ಎಸ್‌ಬಿಎಸ್ ರೇಂಜ್ ಕನ್ವಿನರ್ ರಝಾಕ್ ಸಖಾಫಿ, ನಾಸಿರ್ ಮೂರುಗೋಳಿ, ಜಾರ್ ಮೂರುಗೋಳಿ ಉಪಸ್ಥಿತರಿದ್ದರು.ಕ್ಯಾಂಪಸ್ ನಾಯಕ ಖಲಂದರ್ ಶಾಫಿ ಮೂರುಗೊಳಿ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಎಸ್‌ಬಿಎಸ್ ಕುಪ್ಪೆಟ್ಟಿ ರೇಂಜ್ ಅಧ್ಯಕ್ಷ ನೌಷಾದ್ ಉರುವಾಲ್ ಪದವು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಬಾರಕ್ ಮೂರುಗೋಳಿ ವಂದಿಸಿದರು.

ಮೂಡುಬಿದಿರೆ: ತಡೆಗೋಡೆಗೆ ಶಂಕುಸ್ಥಾಪನೆ 
ಮೂಡುಬಿದಿರೆ, ಮಾ.1: ಕರ್ನಾಟಕ ಸರಕಾರ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಇದರ ವತಿಯಿಂದ ಮೂಡುಬಿದಿರೆ ಸಮೀಪದ ಕಾಯರ್‌ಗುಂಡಿ ಬಳಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುವ ತಡೆಗೋಡೆಗೆ ಸಚಿವ ಕೆ. ಅಭಯಚಂದ್ರ ಜೈನ್ ಶನಿವಾರ ಶಂಕುಸ್ಥಾಪನೆಗೈದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಉಪಾಧ್ಯಕ್ಷ ಪ್ರೇಮನಾಥ ಮಾರ್ಲ, ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸದಸ್ಯ ಸುರೇಶ್ ಪ್ರಭು, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಸುಪ್ರಿಯಾ ಡಿ. ಶೆಟ್ಟಿ, ಅಬ್ದುಲ್ ಬಶೀರ್, ಎಪಿಎಂಸಿ ಸದಸ್ಯ ಜೊಸ್ಸಿ ಮಿನೇಜಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಕಾರ್ಯಾಗಾರ
ಮಂಗಳೂರು, ಮಾ.1: ಕೇಂದ್ರ ಸರಕಾರದ ಎಂಎಸ್‌ಎಂಇ ಸಚಿವಾಲಯದ ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ವಿಭಾಗದ ಆಶ್ರಯದಲ್ಲಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಹಯೋಗದೊಂದಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಕಾರ್ಯಾಗಾರ ನಗರದಲ್ಲಿ ನಡೆಯಿತು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂಎಸ್‌ಎಂಇ ಅಭಿವೃದ್ದಿ ಸಂಸ್ಥೆಯ ನಿರ್ದೇಶಕ ಎಸ್.ಎನ್. ರಂಗಪ್ರಸಾದ್ ಸಣ್ಣ ಹಾಗೂ ಮಧ್ಯಮ (ಎಂಎಸ್‌ಎಂಇ) ಉದ್ದಿಮೆಗಳು ತಮ್ಮ ಕ್ಷೇತ್ರ ಗಳಲ್ಲಿ ಮಾಡುವ ಹೊಸ ಅವಿಷ್ಕಾರಗಳನ್ನು ಬೌದ್ಧಿಕ ಆಸ್ತಿ ಹಕ್ಕಿಗಾಗಿ ( ಐಪಿಆರ್) ನೋಂದಾಯಿಸುವುದು ಅತಿ ಅಗತ್ಯ ಎಂದರು. ಪ್ರಸ್ತುತ ಎಂಎಸ್‌ಎಂಇ ಕ್ಷೇತ್ರದಿಂದ ಐಪಿಆರ್‌ಗೆ ನೋಂದಾವಣೆ ಪ್ರಮಾಣ ಅತ್ಯಂತ ಕನಿಷ್ಠವಾಗಿದೆ. ನೋಂದಣಿಗೆ ಅರ್ಜಿ ಸಲ್ಲಿಸಿದ ಬಳಿಕ ಇದರ ಬಗ್ಗೆ ಬೇರೆಯವರು ಅರ್ಜಿ ಸಲ್ಲಿಸುವಂತಿಲ್ಲ ಎಂದರು. ದ.ಕ.ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಗೋಕುಲ್‌ದಾಸ್‌ನಾಯಕ್ ಕಾರ್ಯಾಗಾರ ಉದ್ಘಾಟಿಸಿದರು. ಚೆನ್ನೈನಪೇಟೆಂಟ್ಸ್ ಮತ್ಯು ವಿನ್ಯಾಸಗಳ ಉಪ ನಿಯಂತ್ರಕ ಆರ್.ದೇವನ್ ಭಾರತೀಯ ಪೇಟೆಂಟ್ ಕಾನೂನು, ಪ್ರಕ್ರಿಯೆಗಳು ಹಾಗೂ ಪರಿಶೀಲನೆ ಕ್ರಮಗಳ ಬಗ್ಗೆ ವಿವರಿಸಿದರು. ಎಂಎಸ್‌ಎಂಇ- ಡಿಐ ಉಪನಿರ್ದೇಶಕ ಎಚ್.ವಿ. ಆನಂದ ಮೂರ್ತಿ, ಎನ್‌ಆರ್‌ಡಿಸಿ ಹಿರಿಯ ಎನ್.ಜಿ. ಲಕ್ಷ್ಮೀ ನಾರಾಯಣ, ಮೈಸೂರಿನ ಐಪಿಎಫ್-ಸಿಐಐ ಅಕಾರಿ ಖ್ಯಾತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News