×
Ad

ಪುತ್ತೂರು ನಗರಸಭೆ ಸೌಲಭ್ಯ ವಿತರಣೆ

Update: 2016-03-01 23:08 IST

ಪುತ್ತೂರು, ಮಾ.1: ನಗರಸಭೆಯ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಭಿನ್ನ ಸಾಮರ್ಥ್ಯದ ಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ, ವಿದ್ಯುತ್ ಸಂಪರ್ಕಕ್ಕೆ ಮತ್ತು ಕುಡಿಯುವ ನೀರು ಯೋಜನೆಗೆ ಕಾರ್ಯಾದೇಶ ನೀಡಲಾಯಿತು. ಭಿನ್ನ ಸಾಮರ್ಥ್ಯದ ಸದಸ್ಯರಿರುವ ಕುಟುಂಬಗಳ ಪೋಷಕರಿಗೆ ಪೋಷಣಾ ಭತ್ತೆಯನ್ನು ವಿತರಿಸಲಾಯಿತು. ಅಧ್ಯಕ್ಷ ಜೀವಂಧರ್ ಜೈನ್ ಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಿದರು. ರೇಖಾ ಜೆ.ಶೆಟ್ಟಿ, ಸೀಮಾ ಗಂಗಾಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News