ಕಾಂಗ್ರೆಸ್ ಹಿನ್ನಡೆಗೆ ಎಸ್‌ಡಿಪಿಐ ಕಾರಣ: ಕೋಡಿಜಾಲ್
ಕೊಣಾಜೆ, ಮಾ.1: ಜಿಪಂ ಚುನಾ ವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಎಸ್‌ಡಿಪಿಐ ಪಕ್ಷ ಕಾರಣವಾಗಿದೆ. ಇದರಿಂದಾಗಿಯೇ ದ.ಕ.ಜಿಪಂ ಅಕಾರ ಬಿಜೆಪಿಗೆ ಸಿಕ್ಕಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಆರೋಪಿಸಿದರು.
ತಾಪಂ, ಜಿಪಂ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪಾವೂರು ಗ್ರಾಮದ ಕೊಂತಪದವಿನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಂಗಳೂರು ತಾಪಂನಲ್ಲಿ ಕಾಂಗ್ರೆಸ್ ಅಕಾರಕ್ಕೆ ಬಂದಿದೆ. ಜಿಪಂನಲ್ಲಿ 20ರಿಂದ 21 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಕೆಲವು ಕಡೆ ಎಸ್‌ಡಿಪಿಐ ಪಕ್ಷದ ಅಭ್ಯರ್ಥಿಗಳು ಸ್ಪರ್ಸುವ ಮೂಲಕ ತಾವೂ ಗೆಲ್ಲದೆ, ಕಾಂಗ್ರೆಸ್ ಅಭ್ಯರ್ಥಿಗಳೂ ಗೆಲ್ಲದಂತೆ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿಗೆ ಲಾಭವಾಯಿತು ಎಂದು ಇಬ್ರಾಹೀಂ ಕೋಡಿಜಾಲ್ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವಿಕಲಚೇತನರಾದ ರಶೀದ್, ಜಯರಾಮ ಆಳ್ವ ಹಾಗೂ ಐವನ್ ಡಿಸೋಜರನ್ನು ಸನ್ಮಾನಿಸಲಾಯಿತು. ಜಿಪಂ ಸದಸ್ಯೆ ಸೀಮಾಮೆಲ್ವಿನ್ ಡಿಸೋಜ, ಜಿಪಂ ಮಾಜಿ ಸದಸ್ಯ ಮೆಲ್ವಿನ್ ಡಿಸೋಜ, ಡಾ.ಯು. ಟಿ.ಇಫ್ತಿಕಾರ್, ತಾಪಂ ಸದಸ್ಯರಾದ ಮಹಮ್ಮದ್ ಮೋನು ಮಲಾರ್, ಅಬ್ದುಲ್ ಜಬ್ಬಾರ್ ಬೋಳಿಯಾರ್, ಸುರೇಖಾ ಚಂದ್ರಹಾಸ, ನೂರ್‌ಜಹಾನ್, ಅಬೂಬಕರ್ ಸಿದ್ದೀಕ್, ಪದ್ಮಾವತಿ ಪೂಜಾರಿ, ಆಲೆ†ಡ್‌ವಿಲ್ಮಾ ಡಿಸೋಜ, ಉಳ್ಳಾಲ ನಗ ರಸಭೆಯ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ಪಾವೂರು ಗ್ರಾಪಂ ಅಧ್ಯಕ್ಷ ಎಂ.ಟಿ.ಫಿರೋಝ್, ಉಪಾ ಧ್ಯಕ್ಷೆ ಲೀಲಾವತಿ, ಸದಸ್ಯರಾದ ಎಂ.ಪಿ.ಹಸನ್, ಸಾತ್ಕೋ ಮಜೀದ್, ವಿವೇಕ ರೈ, ಚಕ್ಕರ್ ಮುಹಮ್ಮದ್ ಇನೋಳಿ, ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಇನೋಳಿ, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಉಗ್ಗಪ್ಪಪೂಜಾರಿ, ಉಳ್ಳಾಲ ಯುವ ಕಾಂಗ್ರೆಸ್ ಅಧ್ಯಕ್ಷ ನಝರ್ ಪಟ್ಟೋರಿ, ಅಬ್ದುರ್ರಹ್ಮಾನ್ ಕೋಡಿಜಾಲ್, ಅಬೂಬಕರ್ ಸಜಿಪ ಉಪಸ್ಥಿತರಿದ್ದರು.