×
Ad

ಉದ್ಯಾವರ ಚರ್ಚ್‌ನಲ್ಲಿ ವಿಮೋಚನ ಕ್ರಿಸ್ತರ ಮೂರ್ತಿ ಪ್ರತಿಷ್ಠಾಪನೆ

Update: 2016-03-01 23:12 IST

ಉಡುಪಿ, ಮಾ.1: ಉದ್ಯಾವರ ಸಂತ ್ರಾನ್ಸಿಸ್ ಝೇವಿಯರ್ ಚರ್ಚ್‌ನ ನೂತನ ಕಟ್ಟಡದಲ್ಲಿ ನಿರ್ಮಿಸಲಾಗಿರುವ ಗೋಪುರದ ಮೇಲೆ ಬೃಹತ್ ಗಾತ್ರದ ವಿಮೋಚನ ಕ್ರಿಸ್ತರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಈ ಮೂರ್ತಿಯು 400 ಕೆ.ಜಿ. ತೂಕವನ್ನು ಹೊಂದಿದ್ದು, 12 ಅಡಿ ಎತ್ತರ ಹಾಗೂ 15 ಅಡಿ ಅಗಲವನ್ನು ಹೊಂದಿದೆ. ಮೂರ್ತಿಯನ್ನು ಮಂಗಳೂರಿನ ಸೈಮನ್ಸ್ ಕಂಪೆನಿ ನಿರ್ಮಿಸಿದ್ದು, ಎರಡು ದಿಕ್ಕು ಗಳಿಂದ ಇದನ್ನು ನೋಡಬಹುದಾಗಿದೆ. ಮೂರ್ತಿಯು ಬೇಸಿಗೆ, ಮಳೆ ಹಾಗೂ ಚಳಿಗಾಲಗಳಿಗೆ ಹೊಂದಿಕೊಳ್ಳುವ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾಗಿದೆ. ಮೂರ್ತಿ ನಿರ್ಮಾಣಕ್ಕೆ ಆವೆ ಮಣ್ಣು, ಕಬ್ಬಿಣ ಹಾಗೂ ೈಬರ್ ವಸ್ತುಗಳನ್ನು ಬಳಸಿದ್ದು, ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರಲಿದೆ. ಚರ್ಚ್‌ನ ಗೋಪುರದ ಮೇಲೆ ಸಂಪೂರ್ಣ ಕಾಂಕ್ರಿಟ್‌ನಿಂದ ಗುಮ್ಮಟದ ರೀತಿಯ ನಿರ್ಮಾಣವನ್ನು ಮಾಡಲಾಗಿದ್ದು, ಈ ರೀತಿಯ ಗುಮ್ಮಟ ಶೈಲಿಯನ್ನು ಉಡುಪಿ ಮತ್ತು ಮಂಗಳೂರು ಧರ್ಮಪ್ರಾಂತ ವ್ಯಾಪ್ತಿಯ ಉದ್ಯಾವರ ಚರ್ಚ್‌ನಲ್ಲಿ ಪ್ರಥಮವಾಗಿ ಪರಿಚಯಿಸಲಾಗಿದೆ. ಎ.28ರಂದು ನೂತನ ಚರ್ಚ್‌ನ ಉದ್ಘಾಟನೆ ಜರಗಲಿದೆ. ಈ ಸಂದರ್ಭ ಚರ್ಚ್‌ನ ಧರ್ಮಗುರು ವಂ. ರೋಕ್ ಡೇಸಾ, ಪಾಲನಾ ಸಮಿತಿಯ ಉಪಾಧ್ಯಕ್ಷ ಲಾರೇನ್ಸ್ ಡೇಸಾ, ಕಾರ್ಯದರ್ಶಿ ಮೈಕಲ್ ಡಿಸೋಜ, ಸಂಚಾಲಕ ಮೆಲ್ವಿನ್ ನೊರೋನ್ಹಾ, ಉದ್ಯಾವರ ಗ್ರಾಪಂ ಉಪಾಧ್ಯಕ್ಷ ರಿಯಾಝ್ ಪಳ್ಳಿ, ಪೆಟ್ರಿಕ್ ಡೇಸಾ, ಜಾನ್ ೆರ್ನಾಂಡಿಸ್, ಜಾನ್ ಡಿಸೋಜ, ಸವಿತಾ ಡಿಸೋಜ, ಸ್ಟೀವನ್ ಕುಲಾಸೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News