ಉಳ್ಳಾಲ: ದ್ಸಿಕ್ರ್ ಮಜ್ಲಿಸ್ ವಾರ್ಷಿಕೋತ್ಸವ
ಉಳ್ಳಾಲ, ಮಾ. 03: ತಾಜುಲ್ ಉಲಮಾ ಸೆಂಟರ್ ಸಿ.ಎಂ ಮಡವೂರು ದ್ಸಿಕ್ರ್ ಮಜ್ಲಿಸ್ ಅಳೇಕಲ ಉಳ್ಳಾಲ ಇದರ ವಾರ್ಷಿಕೋತ್ಸವದ ಪ್ರ0ುುಕ್ತ ಅಳೇಕಲದ ಸಯ್ಯಿದ್ ಪುತ್ತುಕೋ0ು ತಂಙಳ್ ದರ್ಗಾ ಬಳಿ ಬೃಹತ್ ಮುಹಿ0ುದ್ದೀನ್ ಮಾಲೆ ಆಲಾಪಣೆ ಹಾಗೂ ಅಸ್ಸಯ್ಯಿದ್‌ಮುಹಮ್ಮದ್ ಸುಹೈಲ್ ಅಸ್ಸಖಾಫ್ ತಂಙಳ್ ರವರ ನೇತೃತ್ವದಲ್ಲಿ ಸಿ.ಎಂ ಮಡವೂರು ದ್ಸಿಕ್ರ್ ಮಜ್ಲಿಸ್ ಕಾರ್ಯಾಕ್ರಮವು ಇತ್ತೀಚೆಗೆ ನಡೆಯಿತು.
ತಾಜುಲ್ ಉಲಮಾ ಸೆಂಟರ್ ಗಾಗಿ ರಾತ್ರಿ ಹಗಲು ದುಡಿದ ಸಯ್ಯಿದ್ ಜಲಾಲುದ್ದೀನ್ ತಂಙಳ್, ಅಬ್ದುಲ್ ಲತೀಫ್ ಮದನಿ, ಸಿದ್ದೀಕ್ ಹಳೇಕೋಟೆ ಹಾಗೂ ಜಂಶೀರ್ ಅಳೇಕಲ ಇವರಿಗೆ ಎಸ್.ಎಂ ತಂಙಳ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಯ್ಯಿದ್ ಶಾಹುಲ್ ಹಮೀದ್ ತಂಙಳ್ ಸವಣೂರು, ಸಯ್ಯಿದ್ ಅಜ್ಮಲ್ ತಂಙಳ್ ಪೊನ್ನಾನಿ, ಅಬೂ ಝಿಯಾದ್ ಮದನಿ ಪಟ್ಟಾಂಬಿ , ಹಾಜಿ ಎಸ್, ಹಂಝ ಯುಕೆ. ಇಬ್ರಾಹಿಂ, ಎ.ಎ.ಖಾದರ್ , ಹಾಜಿ ಅಬ್ದುಲ್ ರವೂಫ್, ಯು.ಡಿ ಅಶ್ರಫ್,ಅಬ್ದುಲ್ ಲತೀಫ್, ಫಾಝಿಲ್ ಅಳೇಕಲ, ನಝೀರ್ ಅಳೇಕಲ, ಖಾಲಿದ್ ಅಳೇಕಲ ಉಪಸ್ಥಿತರಿದ್ದರು. ಎನ್.ಡಿ. ಅಬೂಬಕ್ಕರ್ ಮದನಿ ಸ್ವಾಗತಿಸಿ ವಂದಿಸಿದರು.