ಮಾ. 3: ಕಿಲ್ಲೂರಿನಲ್ಲಿ "ಮಜ್ಲಿಸ್ ವಸೀಲತುಲ್ಲಾ" ಸ್ವಲಾತ್
Update: 2016-03-02 18:25 IST
ಕಿಲ್ಲೂರು: ಮುಹಿಯುದ್ದೀನ್ ಜುಮ್ಮಾ ಮಸೀದಿ ಕಿಲ್ಲೂರು ಇದರ ಅಂಗಸಂಸ್ಥೆಯಾದ ನೂರುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ಆಶ್ರಯದಲ್ಲಿ ಪ್ರತಿ ತಿಂಗಳಿಗೊಂದು ಬಾರಿ ಆಚರಿಸಿಕೊಂಡು ಬರುತ್ತಿರುವ "ಮಜ್ಲಿಸ್ ವಸೀಲತುಲ್ಲಾ" ಸ್ವಲಾತ್ ಕಿಲ್ಲೂರು ಮಸೀದಿ ವಠಾರದಲ್ಲಿ ಮಾ. 3 ರಂದು ಸಂಜೆ ನಡೆಯಲಿದೆ. ಸಯ್ಯಿದ್ ಶಿಹಾಬುದ್ದೀನ್ ಸಖಾಫಿ ಅಲ್‌ಹೈದ್ರೋಸಿ ತಂಙಳ್ ನೇತೃತ್ವ ನೀಡಲಿದ್ದು ಎಸ್‌ವೈಎಸ್ ರಾಜ್ಯಾಧ್ಯಕ್ಷರೂ ಆಗಿರುವ ಸಅದಿಯಾ ಕಾಲೇಜು ಪ್ರೊಫೆಸರ್ ಕೆ. ಸಿ ರೋಡ್ ಹುಸೈನ್ ಸಅದಿ ಮುಖ್ಯ ಪ್ರಭಾಷಣ ನಡೆಸಿಕೊಡಲಿದ್ದಾರೆ. ಕೊನೆಗೆ ತಬರ್ರುಕ್ ವಿತರಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.