ದೇರಳಕಟ್ಟೆ: ಬೆಂಕಿ ಸುರಕ್ಷತೆಯ ಬಗ್ಗೆ ಅಣುಕು ಪ್ರದರ್ಶನ
ಕೊಣಾಜೆ: ದೇರಳಕಟ್ಟೆಯ ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಯನ್ಸ್‌ನ ಯೂತ್ ರೆಡ್ ಕ್ರಾಸ್ ವಿಭಾಗದ ಆಶ್ರಯದಲ್ಲಿ ಬುಧವಾರ ಬೆಂಕಿ ಸುರಕ್ಷತೆಯ ಬಗ್ಗೆ ಅಣುಕು ಪ್ರದರ್ಶನ ನಡೆಯಿತು.
ಅಣುಕು ಪ್ರದರ್ಶನಕ್ಕೆ ಮುನ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಯನ್ಸ್‌ನ ಪ್ರಾಂಶುಪಾಲರಾದ ಡಾ.ಫಾಟಿಮ ಡಿಸಿಲ್ವ ಪ್ರಕೃತಿ ವಿಕೋಪ ಮತ್ತು ಬೆಂಕಿ ಆಕಸ್ಮಿಕ ಅನಾಹುತಗಳು ಉಂಟಾದಾಗ ಸಾಮಾನ್ಯ ಜನರು ಮಾಡಬೇಕಾದ ಅಗತ್ಯ ಕ್ರಮಗಳ ಬಗ್ಗೆ ವಿವರಿಸಿದರು.
ನಿಟ್ಟೆ ವಿವಿಯ ಬೆಂಕಿ ಮತ್ತು ಸುರಕ್ಷತಾ ಅಧಿಕಾರಿ ಪ್ರಶಾಂತ್ ಅವರು ಬೆಂಕಿ ಅನಾಹುತ ಉಂಟಾದಾಗ ಮಾಡಬೇಕಾದ ತುರ್ತು ಕ್ರಮಗಳನ್ನು ವಿವರಿಸಿ ಬೆಂಇ ನಂಝದಿಸುವ ಕ್ರಮಗಳನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಯೂತ್ ರೆಡ್ ಕ್ರಾಸ್ ವಿಭಾಗದ ಮುಖ್ಯಸ್ಥೆಯಾದ ಪ್ರೊ.ಫಿಲೋಮಿನಾ ಫೆರ್ನಾಂಡಿಸ್, ಇವಾಕ್ಯುವೇಶನ್ ಸುಪರ್‌ವೈಸರ್ ಡಾ.ನೀತಾ ಕಾಮತ್, ರಕ್ಷಿತಾ, ಸ್ವಾತಿ ತುರ್ತು ರಕ್ಷಣಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಿದರು.