×
Ad

ವಿದ್ಯುತ್ ಸಮಸ್ಯೆ ಖಂಡಿಸಿ ಬಿಜೆಪಿಯಿಂದ ಉಪವಾಸ ಸತ್ಯಾಗ್ರಹ

Update: 2016-03-02 19:41 IST

ಸುಳ್ಯ: ವಿದ್ಯುತ್ ಸಮಸ್ಯೆ ಖಂಡಿಸಿ ಹಾಗೂ 110 ಕೆ.ವಿ. ವಿದ್ಯುತ್ ಲೈನ್‌ಗೆ ಆಗ್ರಹಿಸಿ ಬಿಜೆಪಿ ಮಂಡಲ ಸಮಿತಿ, ಭಾರತೀಯ ಕಿಸಾನ್ ಸಂಘ ಮತ್ತು ಭಾರತೀಯ ಮಜ್ದೂರ್ ಸಂಘಗಳ ಆಶ್ರಯದಲ್ಲಿ ಸುಳ್ಯ ಮೆಸ್ಕಾಂ ಕಛೇರಿ ಎದುರು ಉಪವಾಸ ಸತ್ಯಾಗ್ರಹ ನಡೆಯಿತು.

ಸುಳ್ಯ ಮೆಸ್ಕಾಂ ಕಛೇರಿಯ ವಠಾರದಲ್ಲಿ ಶಾಮಿಯಾನ ಹಾಕಿ ಪ್ರತಿಭಟನಾಕಾರರು ಧರಣಿ ಕುಳಿತು ಸರಕಾರ ಹಾಗೂ ಇಂಧನ ಸಚಿವರ ವಿರುದ್ಧ ಘೋಷಣೆ ಕೂಗತೊಡಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು, ಸುಳ್ಯಕ್ಕೆ 110 ಕೆವಿ ಸಬ್‌ಸ್ಟೇಶನ್ ಅನುಷ್ಠಾನದ ನಮ್ಮ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣಿಸುತ್ತೇವೆ. ರಾಜ್ಯದ ಇಂಧನ ಸಚಿವರು ಬೇರೆ ರೀತಿಯಲ್ಲಿ ಪವರ್ ತೋರಿಸುತ್ತಿದ್ದರೆ ಉಸ್ತುವಾರಿ ಸಚಿವರು ಸಮಸ್ಯೆ ಅರಿವಿಲ್ಲದಂತೆ ವರ್ತಿಸುತ್ತಿದ್ದಾರೆ. ಪ್ರಶ್ನಿಸಿದ ಬಡವರ ಮೇಲೆ ಕೇಸು ಮಾಡುತ್ತಿದ್ದೇವೆ. ತಾಕತ್ತಿದ್ದರೆ ಇಂದು ಪ್ರತಿಭಟಿಸಿದವರ ಮೇಲೆಯೇ ಕೇಸು ಮಾಡಿ ಎಂದು ಸವಾಲೆಸೆದರು.

  ಜಿ.ಪಂ. ಸದಸ್ಯ ಎಸ್.ಎನ್.ಮನ್ಮಥ ಮಾತನಾಡಿ, ಚುನಾವಣೆಯಲ್ಲಿ ಗೆದ್ದು ವಿಜಯೋತ್ಸವ ಆಚರಿಸಬೇಕಾದ ನಾವು ಜನರ ಸಮಸ್ಯೆ ಅರಿತು ಪ್ರತಿಭಟನೆ ನಡೆಸುತ್ತಿದ್ದೇವೆ. ಜನಸಾಮಾನ್ಯರ ಧ್ವನಿಯನ್ನು ದಮನಿಸುವಂತಹ ಕೆಲಸವನ್ನು ಸರಕಾರ ಮಾಡುತ್ತಿದೆ. ಸಾಯಿ ಗಿರಿಧರ ರೈಯವರಿಗೆ ಬೈದ ಸಚಿವ ಡಿ.ಕೆ.ಶಿವಕುಮಾರ್ ಮೇಲೆಯೇ ಕೇಸು ಹಾಕಬೇಕು ಎಂದರಲ್ಲದೆ ಈ ಹೋರಾಟದಲ್ಲಿ ಕಾಂಗ್ರೆಸ್‌ನವರು ಪಕ್ಷ ರಾಜಕೀಯ ಮಾಡುವುದು ಬೇಡ. ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಮುಂದೆ ಬಂದರೆ ನಾವೂ ಅವರೊಂದಿಗೆ ಸೇರಿಕೊಳ್ಳುತ್ತೇವೆ ಎಂದು ಹೇಳಿದರು. ಮಾಜಿ ಜಿ.ಪಂ. ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮಾಜಿ ತಾ.ಪಂ. ಅಧ್ಯಕ್ಷೆ ಎನ್.ಎಸ್.ಸುವರ್ಣಿನಿ, ಹಿಂದುಳಿದ ಮೋರ್ಚಾ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಪಂಬೆತ್ತಾಡಿ ಸೊಸೈಟಿ ಉಪಾಧ್ಯಕ್ಷ ಸಂತೋಷ್ ಜಾಕೆ , ಜಿ.ಪಂ. ಸದಸ್ಯರಾದ ಆಶಾ ತಿಮ್ಮಪ್ಪ, ನಗರ ಬಿಜೆಪಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ , ನೆಲ್ಲೂರು ಕೆಮ್ರಾಜೆ ಸೊಸೈಟಿ ನಿರ್ದೇಶಕ ಪ್ರಮೋದ್ ಪೈಲೂರು, ವೆಂಕಟ್ರಮಣ ಸೊಸೈಟಿ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಮಾಜಿ ಜಿ.ಪಂ. ಸದಸ್ಯ ನವೀನ್‌ಕುಮಾರ್ ಮೇನಾಲ, ಬಿಜೆಪಿ ಮಂಡಲ ಸಮಿತಿ ಪ್ರ.ಕಾರ್ಯದರ್ಶಿಗಳಾದ ಮುಳಿಯ ಕೇಶವ ಭಟ್, ರಾಕೇಶ್ ರೈ ಕೆಡೆಂಜಿ, ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಪಿ.ಕೆ.ಉಮೇಶ್, ಎ.ವಿ.ತೀರ್ಥರಾಮ, ಸರಾಧಾಕೃಷ್ಣ ಬೊಳ್ಳೂರು, ಮೊದಲಾದವರು ಮಾತನಾಡಿದರು.

 ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ, ತಾ.ಪಂ. ಸದಸ್ಯರಾದ ಉದಯ ಕೊಪ್ಪಡ್ಕ, ಯಶೋದಾ ಬಾಳೆಗುಡ್ಡೆ, ವಿದ್ಯಾಲಕ್ಷ್ಮಿ ಎರ್ಮೆಟ್ಟಿ, ಪುಷ್ಪಾ ಮೇದಪ್ಪ, ಚನಿಯ ಕಲ್ತಡ್ಕ, ಜಾಹ್ನವಿ ಕಾಂಚೋಡು, ಬಿಜೆಪಿ ನಾಯಕರಾದ ಪಿ.ಜಿ.ಎಸ್.ಎನ್.ಪ್ರಸಾದ್, ವೆಂಕಟ್ ವಳಲಂಬೆ, ಗುಣವತಿ ಕೊಲ್ಲಂತಡ್ಕ, ಹರೀಶ್ ಉಬರಡ್ಕ, ಎ.ಟಿ.ಕುಸುಮಾಧರ, ಡಾ ರಾಮಯ್ಯ ಭಟ್, ದಿಲೀಪ್ ಬಾಬ್ಲುಬೆಟ್ಟು, ದೀಪಕ್ ಕುತ್ತಮೊಟ್ಟೆ, ವಿನಯಕುಮಾರ್ ಮುಳುಗಾಡು, ಬಾಗೀರಥಿ ಮುರುಳ್ಯ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಬಿಜೆಪಿ ಪ್ರತಿಭಟನೆಯಲ್ಲಿ ಜೆಡಿಎಸ್ ಅಧ್ಯಕ್ಷರ ಭಾಷಣ!

 ಸುಳ್ಯ: ಬಿಜೆಪಿ ಮಂಡಲ ಸಮಿತಿ, ಭಾರತೀಯ ಕಿಸಾನ್ ಸಂಘ ಮತ್ತು ಭಾರತೀಯ ಮಜ್ದೂರ್ ಸಂಘಗಳ ಆಶ್ರಯದಲ್ಲಿ ನಡೆದ ಉಪವಾಸ ಸತ್ಯಾಗ್ರಹದ ಮಧ್ಯೆ ತಾಲೂಕು ಜೆಡಿಎಸ್ ಅಧ್ಯಕ್ಷ ದಯಾಕರ ಆಳ್ವ ಆಗಮಿಸಿ ಭಾಷಣ ಮಾಡಿದರು. ಕೆಲಸ ನಿಮಿತ್ತ ಮೆಸ್ಕಾಂ ಕಛೇರಿಗೆ ಬಂದಿದ್ದ ಅವರು ನಾಯಕರ ಕೇಳಿಕೆ4 ಮೇರೆಗೆ ಪ್ರತಭಟನೆಯಲ್ಲಿಗೆ ಬಂದು ಭಾಷಣ ಮಾಡಿ ಬೆಂಬಲ ಸೂಚಿಸಿದರು.

ಉಪವಾಸ ಸತ್ಯಾಗ್ರಹ ವೇಳೆಗೆ ಪಕ್ಷದ ಹಿರಿಯ ಕಾರ್ಯಕರ್ತರಾದ ಸುವರ್ಣಿನಿ, ಆಶಾ ತಿಮ್ಮಪ್ಪ, ಗುಣವತಿ ಕೊಲ್ಲಂತಡ್ಕ ಸೇರಿದಂತೆ ಹಲವರು ದೇಶ ಭಕ್ತಿಗೀತೆಗೆಳನ್ನು ಹಾಡಿದರು. ಉಳಿದ ಕಾರ್ಯಕರ್ತರು ಅದಕ್ಕೆ ದನಿಗೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News