ಬೆಳ್ತಂಗಡಿ : ಮಾ.13ರಂದು ಸಪ್ತತಿ ಅಭಿನಂದನಾ ಸಮಾರಂಭ
ಬೆಳ್ತಂಗಡಿ : ಉಜಿರೆಯ ಬೆಳವಣಿಗೆಯ ಹರಿಕಾರ ಸರಳ ಸ್ವಭಾವದ ಎಲ್ಲರೂ ಗೌರವಿಸುವ ಮಿತ, ಹಿತ, ಮೃಧುಭಾಷಿ, ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮುಕ್ತೇಸರ ಯು ವಿಜಯರಾಘವ ರಾಘವ ಪಡ್ವೆಟ್ನಾಯರು ಸಾರ್ಥಕ 70 ಸಂವತ್ಸರಗಳನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಸಪ್ತತಿ ಅಭಿನಂದನಾ ಸಮಾರಂಭ ಮಾ.13ರಂದು ಉಜಿರೆ ಜನಾರ್ದನ ಸ್ವಾಮಿ ದೇವಸ್ತಾನದ ಪ್ರಾಂಗಣದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಡಾ ಬಿ ಯಶೋವರ್ಮ ತಿಳಿಸಿದ್ದಾರೆ.
ಅವರು ಬುಧವಾರ ಉಜಿರೆ ಎಸ್‌ಡಿಎಂ ಕಾಲೇಜಿನಲಿ್ಲ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದು ಉಡುಪಿ ಕಾಣಿಯೂರು ಮಠದ ಶ್ರೀ ವಿಧ್ಯಾವಲ್ಲಭತೀರ್ಧ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಪ್ರಯುಕ್ತ ಸಾಮಾಜಿಕ ಸೇವಾ ಕಾರ್ಯಕ್ರಮ ಮಾಡಲು ಹಮ್ಮಿಕೊಂಡಿದ್ದು ಮಾ. 6 ಮತ್ತು 13ರಂದು ಉಜಿರೆ ಶಾರದಾ ಮಂಟಪದಲ್ಲಿ ಬೃಹತ್ ರಕ್ತದಾನ ಶಿಬಿರ, ಮಾ.27ರಂದು ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಮಾ.10ರಂದು ಉಜಿರೆ ಗ್ರಾ. ಪಂ. ಹಾಗೂ ಸಾರ್ವಜನಿಕರ ವತಿಯಿಂದ ಉಜಿರೆಯಲ್ಲಿ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಶಾಶ್ವತ ನೆನಪಿಗಾಗಿ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಗೋಪುರ ನಿರ್ಮಾಣ ಮಾಡಲಿದ್ದು ಮತ್ತು ಅಭಿನಂದನಾ ಗ್ರಂಥ ಹೊರತರಲು ನಿರ್ಧರಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಅಭಿನಂದಾ ಸಮಿತಿಯ ಉಪಾಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಪ್ರಸಾದ್ ಮತ್ತು ಪದಾಧಿಕಾರಿಗಳಾದ ಶ್ರೀಧರ್, ಲಕ್ಷ್ಮಣ ಸಪಲ್ಯ, ರಾಘವೇಂದ್ರ ಬೈಪಡಿತ್ತಾಯ, ಮೋಹನ್ ಶೆಟ್ಟಿಗಾರ್, ಸೊೀಮಶೇಖರ್ ಶೆಟ್ಟಿ ಉಪಸ್ಥಿತರಿದ್ದರು.