×
Ad

ಸೈಂಟ್ ರೇಮಂಡ್ ಕಾಲೇಜ್:ವಾರಂತ್ಯ ಪತ್ರಿಕೋದ್ಯಮ ಶಿಬಿರಕ್ಕೆ ಚಾಲನೆ

Update: 2016-03-02 21:57 IST

ಮಂಗಳೂರು,ಮಾ.2:ಸೈಂಟ್ ರೇಮಂಡ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿನೂತನ ವಾಗಿ ಆಯೋಜಿಸಿದ ವಾರಾಂತ್ಯ ಪತ್ರಿಕೋದ್ಯಮ ಶಿಬಿರವನ್ನು ಪತ್ರಕರ್ತ ಗುರುವಪ್ಪ ಬಾಳೇಪುಣಿ ಉದ್ಘಾಟಿಸಿದರು.

 ಗ್ರಾಮೀಣ ಪತ್ರಿಕೋದ್ಯಮ ಆಸಕ್ತಿಯುತ ಕ್ಷೇತ್ರವಾಗಿದ್ದು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಯೋಗ್ಯವಾದ ಕೇತ್ರವಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಅಡಗಿರುವ ಉತ್ತಮ ವಿಷಯಗಳನ್ನು ವರದಿ ಮಾಡುವ ಮೂಲಕ ಪ್ರಚಾರಮಾಡಬೇಕು ಎಂದರು.

   ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಂಗ್ರಹಿಸಿದ ಹಳೆಯ ಪತ್ರಿಕೆಗಳ ಸಂಗ್ರಹ ಪ್ರದರ್ಶನವನ್ನು ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್‌ನಾಯಕ್ ಉದ್ಘಾಟಿಸಿದರು. ಗೋವಿಂದದಾಸ ಕಾಲೇಜಿನ ಉಪನ್ಯಾಸಕ ಶ್ರೀನಿವಾಸ ಹೊಡೆಯಾಲ, ಸಂಸ್ಥೆಯ ಪ್ರಿನ್ಸಿಪಾಲ್ ಸೆಲಿನ್‌ವಾಸ್, ಉಪಪ್ರಿನ್ಸಿಪಾಲ್ ಸಗಯಾ ಸೆಲ್ವಿ , ಕಾರ್ಯಕ್ರಮ ಸಂಯೋಜಕ ಡೊಂಬಯ್ಯ ಇಡ್ಕಿದು ಉಪಸ್ಥಿತರಿದ್ದರು. ಮಾಚ್ 5ರಂದು ಸೃಜನಾತ್ಮಕ ಬರವಣಿಗೆ ಬಗ್ಗೆ ಮಹೇಶ್ ಆರ್ ನಾಯಕ್, ಮಂಗಳೂರು ಸಮಾಚಾರ ,ಬಾಸೆಲ್‌ಮಿಷನಿಗರ ಕೊಡುಗೆ ಬಗ್ಗೆ ಥಿಯಾಲಾಜಿಕಲ್ ಕಾಲೇಜಿನ ಪತ್ರಗಾರದ ಬೆನೆಟ್ ಅಮ್ಮನ್ನ , ಪೊಟೋಗ್ರಾಫಿಕ್ ಬಗ್ಗೆ ಪತ್ರಕರ್ತ ರವಿ ಪೊಸವಣಿಕೆ ಕಾರ್ಯಕ್ರಮ ನಡೆಸಿಕೊಡಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ಸುಗೊಳಿಸುವಂತೆ ಸಂಘಟಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News