ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಏಸ್ಟಸ್ 2ಕೆ16’ ಕಾರ್ಯಕ್ರಮ
Update: 2016-03-02 23:05 IST
ಮಂಗಳೂರು, ಮಾ.2: ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏಸ್ಟಸ್ 2ಕೆ16 ಎಂಬ ಶೀರ್ಷಿಕೆಯಡಿ ಕಾಲೇಜು ವಿಭಾಗ ಮಟ್ಟದ ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲ ಡಾ ಅಬ್ದುಲ್ ಷರೀಫ್ ಉದ್ಘಾಟಿಸಿದರು. ಸುಮಾರು 40ಕ್ಕೂ ಮಿಕ್ಕಿದ ಸ್ಪರ್ಧೆಗಳು ಜರಗಿದವು. ಪ್ರೊ† ಶೈನಿ ಮೆಥ್ಯೊ, ಪ್ರೊ. ರಷಲ್ ಸರ್ಕಾರ್ ಮತ್ತು ಪ್ರೊ. ಶೋಯಿಬ್ ಕಮಲ್ ಕಾರ್ಯಕ್ರಮ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ಫೆಬ್ರವರಿ 27ರಂದು ಸಮಾರೋಪ ಸಮಾರಂಭವು ನಡೆಯಿತು. ಉಪಪ್ರಾಂಶುಪಾಲ ಡಾ†. ರಮೀಸ್ ಎಂ.ಕೆ., ಶೈಕ್ಷಣಿಕ ನಿರ್ದೇಶಕಾರದ ಪ್ರೊ†. ಸರ್ಫರಾಜ್ ಹಾಶಿಮ್ ಜೆ., ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಮುಖ್ಯಸ್ಥರಾದ ಡಾ† ಆ್ಯಂಟನಿ ಎ.ಜೆ. ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕರಾದ ಪ್ರೊ† . ನಬೀಲ್ ಅಹ್ಮದ್ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.