ಮುಲ್ಕಿ: ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ
ಮುಲ್ಕಿ, ಮಾ.2: ಬಿಲ್ಲವ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಮುಲ್ಕಿ ವಿಜಯಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಬಿಲ್ಲವ ಟ್ರೋಫಿ ಅಂತಾ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕೂಟದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎರಡು ದಿನ ನಡೆದ ಕ್ರೀಡಾ ಕೂಟದಲ್ಲಿ ಒಟ್ಟು16 ತಂಡಗಳು ಭಾಗವಹಿಸಿದ್ದು, ಬಿಲ್ಲವರ ಮಹಾ ಮಂಡಲ ಮತ್ತು ಕುವೈಟ್ ಬಿಲ್ಲವ ಸಂಘದ ನಡುವೆ ಫೈನಲ್ ಪಂದ್ಯ ನಡೆದಿದ್ದು ಬಿಲ್ಲವರ ಮಹಾಮಂಡಲ ಮೂಲ್ಕಿ ತಂಡವು ಜಯಗಳಿಸಿ ಟ್ರೋಫಿ ಮತ್ತು 2 ಲಕ್ಷ ರೂ. ನಗದು ಗೆದ್ದು ಕೊಂಡಿದೆ. ಬಿಲ್ಲವರ ಮಹಾಮಂಡಲದ ಅರ್ಜುನ್ ಉತ್ತಮ ಬೌಲರ್, ಬಿಲ್ಲವರ ಸಂಘ ಕುವೈಟ್ ತಂಡದ ಶೈಲೇಶ್ ಉತ್ತಮ ಬ್ಯಾಟ್ಸ್‌ಮನ್ ಮತ್ತು ಬಿಲ್ಲವರ ಮಹಾಮಂಡಲದ ಅರ್ಜುನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಉದ್ಯಮಿ ಜಯರಾಮ್ ಬನಾನ್ ಪ್ರಶಸ್ತಿ ವಿತರಿಸಿದರು. ಬಿಲ್ಲವ ಕ್ರೀಡಾ ಸಮಿತಿಯ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಸ್ವಾಗತಿಸಿದರು.
ಕಾರ್ಯಾಧ್ಯಕ್ಷ ಎಂ.ಚಂದ್ರಶೇಖರ್ ಸುವರ್ಣ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಮುಂಬೈ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬಿಲ್ಲವ ಜಾಗೃತಿ ಬಳಗದ ಸ್ಥಾಪಕಾಧ್ಯಕ್ಷ ಸೂರು ಬಿ.ಕರ್ಕೇರ, ಅಖಿಲ ಭಾರತ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ, ಬಿಲ್ಲವಾಸ್ ದುಬ್ಯಾ ಅಧ್ಯಕ್ಷ ಸತೀಶ್ ಪೂಜಾರಿ, ಗುರುಸೇವಾ ಸಮಿತಿ ಬಹ್ರೈನ್ ಬಿಲ್ಲವಾಸ್ ಅಧ್ಯಕ್ಷ ರಾಜ್‌ಕುಮಾರ್, ಒಮನ್ ಬಿಲ್ಲವಾಸ್ ಮಸ್ಕತ್ ಅಧ್ಯಕ್ಷ ಎಸ್. ಕೆ.ಪೂಜಾರಿ, ಕುವೈಟ್ ಬಿಲ್ಲವ ಸಂಘದ ಅಧ್ಯಕ್ಷ ಚಿತ್ರೇಕ್ ಬಂಗೇರ, ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್. ಟಿ. ಪೂಜಾರಿ, ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರ, ಬೆಂಗಳೂರು ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಎಂ.ವೇದ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್, ಶ್ರೀ ನಾರಾಯಣ ಗುರು ವೇದಿಕೆಯ ಅಧ್ಯಕ್ಷ ಲೋಹಿತ್ ಕುಮಾರ್, ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಮತ್ತಿತರರು ಇದ್ದರು. ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು ಉಪಸ್ಥಿತರಿದ್ದರು.