×
Ad

ಎಸ್ಸೆಸ್ಸೆಫ್: ಭಯೋತ್ಪಾದನೆ ವಿರುದ್ಧ ಆಂದೋಲನ

Update: 2016-03-02 23:07 IST

ಬಂಟ್ವಾಳ, ಮಾ.2: ಎಸ್ಸೆಸ್ಸೆಫ್ ರಾಜ್ಯಾದ್ಯಂತ ಭಯೋತ್ಪಾದನೆ ವಿರುದ್ಧ ಜಿಹಾದ್ ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡ ಆಂದೋಲನದ ಭಾಗವಾಗಿ ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ಎಸ್.ಬಿ.ಎಸ್. ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾವು ಮೈಂದಾಳ ಜಂಕ್ಷನ್‌ನಿಂದ ಪ್ರಾರಂಭಗೊಂಡು ಮಣಿಹಳ್ಳ ಜಂಕ್ಷನ್‌ನಲ್ಲಿ ಸಮಾಪ್ತಿಗೊಂಡಿತು.

  ಮುಖ್ಯ ಪ್ರಭಾಷಣಗಾರರಾಗಿ ಕೆ.ಎಂ ಬಶೀರ್ ಮದನಿ ಸಖಾಫಿ ಕಾಮಿಲ್ ಕೂಳೂರ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಸಖಾಫಿ ಅಜಿಲಮೊಗರು, ಎಸ್.ವೈ.ಎಸ್. ಬಂಟ್ವಾಳ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಪೆರಾಲ, ಕಾರ್ಯದರ್ಶಿ ಇಸ್ಮಾಯೀಲ್ ಅಗ್ರಹಾರ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಜನ್ ಉಪಾಧ್ಯಕ್ಷರಾದ ಅಬ್ದುರ್ರಶೀದ್ ವಗ್ಗ, ಜಬ್ಬಾರ್ ಸಅದಿ ಮಾವಿನಕಟ್ಟೆ, ಎಸ್.ವೈ.ಎಸ್. ಅಗ್ರಹಾರ ಶಾಖೆಯ ಅಧ್ಯಕ್ಷರಾದ ಇಸ್ಮಾಯೀಲ್ ಹಾಜಿ, ಮಣಿಹಳ್ಳ ಇಬ್ರಾಹೀಂ ಹಾಜಿ ಅಗ್ರಹಾರ, ಅಝೀಝ್ ಸಅದಿ ಅಗ್ರಹಾರ, ಮುಹಮ್ಮದ್ ಮುಸ್ಲಿಯಾರ್ ಸರಪಾಡಿ,ಅಬ್ದುಲ್ ಕರೀಂ ಕುಲಾಲ್,ಎನ್.ಎಸ್. ಶಾಹುಲ್ ಹಮೀದ್ ಅಜಿಲಮೊಗರು, ಹಾರಿಸ್ ಪೆರಿಯಪಾದೆ, ಮನ್ಸೂರ್ ವಗ್ಗ ಭಾಗವಹಿಸಿದ್ದರು.

 ಮಚ್ಚಂಪಾಡಿ ಮಖಾಂ ಉರೂಸ್ ಪ್ರಯುಕ್ತ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ ಮಂಜೇಶ್ವರ, ಮಾ.2: ಮಚ್ಚಂಪಾಡಿ ಮಖಾಂ ಉರೂಸ್ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರ ಹಾಗೂ ರಕ್ತದಾನ ಶಿಬಿರವು ಮಚ್ಚಂಪಾಡಿ ಹಿಮಾಯತುಲ್ ಇಸ್ಲಾಂ ಮದ್ರಸಾ ಹಾಲ್ ನಲ್ಲಿ ನಡೆಯಿತು. ಶಿಬಿರವನ್ನು ಡಾ.ಮುರಳೀ ಮೋಹನ್ ಚೂಂತಾರು ಉದ್ಘಾಟಿಸಿದರು. ಉರೂಸ್ ಸಮಿತಿ ಅಧ್ಯಕ್ಷ ಪಿ.ಎಚ್.ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ಪಿ.ಎಚ್. ಹುಸೈನಾರ್, ಅಬ್ದುರ್ರಹ್ಮಾನ್ ಹಾಜಿ , ಮತ್ತಿತರರು ಉಸ್ಥಿತರಿದ್ದರು. ರಾಝಿಕ್ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News