ಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಆರೋಪಿಗಳ ಸೆರೆ
Update: 2016-03-02 23:35 IST
ಮಂಜೇಶ್ವರ, ಮಾ.2: ಕಾಞಂಗಾಡ್ ಇಕ್ಬಾಲ್ ಹೈಯರ್ ಸೆಕೆಂಡರಿ ಶಾಲೆ ಪರಿಸರದಿಂದ ತಿರುವನಂತಪುರ ಚಿರಯಿನ್‌ಕೀಳ್ ನಿವಾಸಿ ಫಿರಂಗಿ ಜನಾರ್ದನನ್ ಯಾನೆ ಜನಾರ್ದನನ್ (60)ನನ್ನು ನಾರ್ಕೊಟಿಕ್ ಸೆಲ್ ಬಂಧಿಸಿದೆ. ಈತ ಶಾಲಾ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದುದಾಗಿ ದೂರು ನೀಡಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ ಒಡಿಶಾದಿಂದ ಡಸ್ಟರ್ ಕಾರಿನಲ್ಲಿ ಕಾಸರಗೋಡಿಗೆಸಾಗಿಸಿದ 80 ಕಿಲೋ ಗಾಂಜಾ ಪ್ರಕರಣದ ಆರೋಪಿಯಾಗಿರುವ ಕಾರು ಚಾಲಕ ಮೀಯಪದವು ನಿವಾಸಿ ವಿಲ್ಲಿ ಡಿಸೋಜ(26)ಎಂಬಾತನನ್ನು ಡಿವೈಎಸ್ಪಿ ಎಂ.ವಿ.ಸುಕುಮಾರನ್, ಕುಂಬಳೆ ಸಿಐ ಕೆ.ವಿ.ಸುರೇಶ್ ಬಾಬು ನೇತೃತ್ವದಲ್ಲಿ ಕರ್ನಾಟಕದಿಂದ ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ತಲಾ 5 ಗ್ರಾಂ ಗಾಂಜಾ ಸಹಿತ ಉಪ್ಪಳ ನಿವಾಸಿಗಳಾದ ಮುಹಮ್ಮದ್ ನುಅ್ಮಾನ್(26) ಮತ್ತು ನಿಝಾಮುದ್ದೀನ್ (20)ಎಂಬವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.