ಆರಿಕ್ಕಾಡಿಯಲ್ಲಿ ಘರ್ಷಣೆ: ನಾಲ್ವರಿಗೆ ಗಾಯ
Update: 2016-03-02 23:36 IST
ಮಂಜೇಶ್ವರ, ಮಾ.2: ಆರಿಕ್ಕಾಡಿಯಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಆರಿಕ್ಕಾಡಿಯ ಧನಂಜಯ(20), ಹರ್ಷವಧರ್ನ್, ಸರ್ಫ್‌ರಾಝ್(25) ಮತ್ತು ಮೊಯ್ದೀನ್(40) ಗಾಯಗೊಂಡವರು. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ಸೇರಿಸಲಾಗಿದ್ದು, ಧನಂಜಯ ನೀಡಿದ ದೂರಿನಂತೆ ಆರು ಮಂದಿಯ ವಿರುದ್ಧ ಕುಂಬಳೆ ಪೊಲೀಸರು ದೂರು ದಾಖಲಿಸಿದ್ದಾರೆ. ಧನಂಜಯ ಮತ್ತು ಸ್ನೇಹಿತ ಹರ್ಷವರ್ಧನ್ ಬೈಕ್ ನಲ್ಲಿ ತೆರಳುತ್ತಿರುವಾಗ ತಡೆದು ನಿಲ್ಲಿಸಿ ಆಕ್ರಮಿಸಿರುವುದಾಗಿ ದೂರಲ್ಲಿ ತಿಳಿಸಲಾಗಿದೆ.ಆದರೆ ಅತಿ ವೇಗದಲ್ಲಿ ಬೈಕ್ ಚಲಾಯಿಸಿರುವುದನ್ನು ಪ್ರಶ್ನಿಸಿದ್ದರಿಂದ ಸರ್ಫ್‌ರಾಝ್ ಹಾಗೂ ಮೊಯ್ದೀನ್‌ರನ್ನು ಆಕ್ರಮಿಸಿರುವುದಾಗಿ ಮತ್ತೊಂದು ದೂರಲ್ಲಿ ತಿಳಿಸಲಾಗಿದೆ.