×
Ad

ಮಂಗಳೂರು : ಮಾರ್ಚ್ 4ಕ ರಂದು ಬಂದರ್ ನಲ್ಲಿ ಧಾರ್ಮಿಕ ಪ್ರವಚನ

Update: 2016-03-02 23:37 IST

ಮಂಗಳೂರು : ಕುರಾನ್ ಮತ್ತು ಸುನ್ನತ್ ನ ಆಧಾರದಲ್ಲಿ ಅಂಧಕಾರದಿಂದ ಪ್ರಕಾಶದೆಡೆಗೆ ಬರಲು " SKSM®- ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ "  ಕುದ್ರೋಳಿ  ಘಟಕದ ವತಿಯಿಂದ  ಧಾರ್ಮಿಕ ಪ್ರವಚನ ಕಾರ್ಯಕ್ರಮ ಬಂದರ್ ಕಂಡತ್ ಪಳ್ಳಿ ಸಮೀಪದ ಭಟ್ಕಳ್ ಬಝಾರ್ ನಲ್ಲಿ  ಇನ್ ಶಾ ಅಲ್ಲಾಹ್ ಶುಕ್ರವಾರ ಮಾರ್ಚ್ 4 ಕ  ರಂದು ಮಗ್ರಿಬ್ ನಮಾಝಿನ ನಂತರ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮಾಜಿ SSF ಕೊಲ್ಲಮ್ ಜಿಲ್ಲೆ ಕಾರ್ಯದರ್ಶಿಮೌಲವಿ ಸಲೀಂ ಹಮದನಿ ನೈಜ ಅಹ್ಲುಸ್ಸುನ್ನ ವಲ್ ಜಮಾಅಃ ಎಂಬ ವಿಷಯದಲ್ಲಿ ಹಾಗೂ ಕುದ್ರೋಳಿ ಸಲಫಿ ಮಸೀದಿಯ ಖತೀಬರದ ಮೌಲವಿ ಮುಸ್ತಫಾ ದಾರಿಮಿಯವರು ತೌಹೀದ್ ಎಂಬ ವಿಷಯದಲ್ಲಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದು SKSM ಕುದ್ರೋಳಿ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News