ಸುಳ್ಯ: ವಿದ್ಯುತ್ ಸಮಸ್ಯೆ ಖಂಡಿಸಿ ಉಪವಾಸ ಧರಣಿ
ಸುಳ್ಯ, ಮಾ.2: ವಿದ್ಯುತ್ ಸಮಸ್ಯೆ ಖಂಡಿಸಿ ಹಾಗೂ 110 ಕೆ.ವಿ. ವಿದ್ಯುತ್ ಲೈನ್‌ಗೆ ಆಗ್ರಹಿಸಿ ಬಿಜೆಪಿ ಮಂಡಲ ಸಮಿತಿ, ಭಾರ ತೀಯ ಕಿಸಾನ್ ಸಂಘ ಮತ್ತು ಭಾರತೀಯ ಮಜ್ದೂರ್ ಸಂಘಗಳ ಆಶ್ರಯದಲ್ಲಿ ಸುಳ್ಯ ಮೆಸ್ಕಾಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಯಿತು.
ಈ ಸಂದರ್ಭ ಮಾತನಾಡಿದ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುಳ್ಯಕ್ಕೆ 110 ಕೆವಿ ಸಬ್‌ಸ್ಟೇಶನ್ ಅನುಷ್ಠಾನದ ನಮ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸುತ್ತೇವೆ. ರಾಜ್ಯದ ಇಂಧನ ಸಚಿವರು ಬೇರೆ ರೀತಿಯಲ್ಲಿ ಪವರ್ ತೋರಿಸುತ್ತಿದ್ದರೆ, ಉಸ್ತುವಾರಿ ಸಚಿವರು ಸಮಸ್ಯೆ ಅರಿವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದರು. ಜಿಪಂ ಸದಸ್ಯ ಎಸ್.ಎನ್.ಮನ್ಮಥ ಮಾತ ನಾಡಿದರು.
ಮಾಜಿ ಜಿಪಂ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮಾಜಿ ತಾಪಂ ಅಧ್ಯಕ್ಷೆ ಎನ್.ಎಸ್.ಸುವರ್ಣಿನಿ, ಹಿಂದುಳಿದ ಮೋರ್ಚಾ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಪಂಬೆತ್ತಾಡಿ ಸೊಸೈಟಿ ಉಪಾಧ್ಯಕ್ಷ ಸಂತೋಷ್ ಜಾಕೆ, ಜಿಪಂ ಸದಸ್ಯರಾದ ಆಶಾ ತಿಮ್ಮಪ್ಪ, ನಗರ ಬಿಜೆಪಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನೆಲ್ಲೂರು ಕೆಮ್ರಾಜೆ ಸೊಸೈಟಿ ನಿರ್ದೇಶಕ ಪ್ರಮೋದ್ ಪೈಲೂರು, ವೆಂಕಟ್ರಮಣ ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರ್, ಮಾಜಿ ಜಿ.ಪಂ. ಸದಸ್ಯ ನವೀನ್‌ಕುಮಾರ್ ಮೇನಾಲ, ಬಿಜೆಪಿ ಮಂಡಲ ಸಮಿತಿ ಪ್ರ.ಕಾರ್ಯ ದರ್ಶಿಗಳಾದ ಮುಳಿಯ ಕೇಶವ ಭಟ್, ರಾಕೇಶ್ ರೈ ಕೆಡೆಂಜಿ, ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಪಿ.ಕೆ.ಉಮೇಶ್, ಎ.ವಿ.ತೀರ್ಥರಾಮ, ರಾಧಾಕೃಷ್ಣ ಬೊಳ್ಳೂರು ಮೊದಲಾದವರು ಮಾತನಾಡಿದರು.
ಜಿಪಂ ಸದಸ್ಯೆ ಪುಷ್ಪಾವತಿ ಬಾಳಿಲ, ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ತಾಪಂ ಸದಸ್ಯರಾದ ಉದಯ ಕೊಪ್ಪಡ್ಕ, ಯಶೋದಾ ಬಾಳೆಗುಡ್ಡೆ, ವಿದ್ಯಾಲಕ್ಷ್ಮೀ ಎರ್ಮೆಟ್ಟಿ, ಪುಷ್ಪಾಮೇದಪ್ಪ, ಚನಿಯ ಕಲ್ತಡ್ಕ, ಜಾಹ್ನವಿ ಕಾಂಚೋಡು, ಪಿ.ಜಿ.ಎಸ್.ಎನ್. ಪ್ರಸಾದ್, ವೆಂಕಟ್ ವಳಲಂಬೆ, ಗುಣವತಿ ಕೊಲ್ಲಂ ತಡ್ಕ, ಹರೀಶ್ ಉಬರಡ್ಕ, ಎ.ಟಿ. ಕುಸುಮಾಧರ, ಡಾ.ರಾಮಯ್ಯ ಭಟ್, ದಿಲೀಪ್ ಬಾಬ್ಲುಬೆಟ್ಟು, ದೀಪಕ್ ಕುತ್ತಮೊಟ್ಟೆ, ವಿನಯಕುಮಾರ್ ಮುಳುಗಾಡು, ಭಾಗೀರಥಿ ಮುರುಳ್ಯ ಮತ್ತಿತರರು ಭಾಗವಹಿಸಿದ್ದರು.
ಜೆಡಿಎಸ್ ಅಧ್ಯಕ್ಷರ ಭಾಷಣ!
ಬಿಜೆಪಿ ಮಂಡಲ ಸಮಿತಿ, ಭಾರತೀಯ ಕಿಸಾನ್ ಸಂಘ ಮತ್ತು ಭಾರತೀಯ ಮಜ್ದೂರ್ ಸಂಘಗಳ ಆಶ್ರಯದಲ್ಲಿ ನಡೆದ ಉಪವಾಸ ಧರಣಿ ಸಂದರ್ಭ ತಾಲೂಕು ಜೆಡಿಎಸ್ ಅಧ್ಯಕ್ಷ ದಯಾಕರ ಆಳ್ವ ಆಗಮಿಸಿ ಭಾಷಣ ಮಾಡಿದರು. ಕೆಲಸ ನಿಮಿತ್ತ ಮೆಸ್ಕಾಂ ಕಚೇರಿಗೆ ಬಂದಿದ್ದ ಅವರು, ನಾಯಕರ ಕೇಳಿಕೆಯ ಮೇರೆಗೆ ಭಾಷಣ ಮಾಡಿ ಬೆಂಬಲ ಸೂಚಿಸಿದರು.