ಮಾ.5-6: ‘ವರ್ಣೋದಯ’ ರಾಜ್ಯಮಟ್ಟದ ಚಿತ್ರಕಲಾ ಶಿಬಿರ
ಉಡುಪಿ, ಮಾ.2: ಉಡುಪಿಯ ಕಿದಿಯೂರು ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕಿದಿಯೂರು ಸ್ಕೂಲ್ ಆಫ್ ಆರ್ಟ್ಸ್‌ನ ಸಹಯೋಗದೊಂದಿಗೆ ‘ವರ್ಣೋ ದಯ’ ರಾಜ್ಯಮಟ್ಟದ ಚಿತ್ರಕಲಾ ಶಿಬಿರವನ್ನು ಮಾ.5 ಮತ್ತು 6ರಂದು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ 13 ಮಂದಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಸಿದ್ಧ ಚಿತ್ರ ಕಲಾವಿದರು ಭಾಗವಹಿಸಿ ಕಲಾಕೃತಿಗಳನ್ನು ರಚಿಸಲಿರುವರು ಎಂದು ಟ್ರಸ್ಟ್‌ನ ಪ್ರವರ್ತಕ ಉದಯ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಾ.5ರಂದು ಬೆಳಗ್ಗೆ 10 ಗಂಟೆಗೆ ವರ್ಣೋದಯವನ್ನು ಡಾ.ಜಿ.ಶಂಕರ್ ಉದ್ಘಾಟಿಸಲಿರುವರು. ಮಾ.6ರಂದು ಅಪರಾಹ್ನ 2ರಿಂದ ಸಂಜೆ 4ರವರೆಗೆ 1-4 ತರಗತಿ (ವಿಷಯ-ಐಚ್ಛಿಕ), 5-7ನೆ ತರಗತಿ(ಊರ ಜಾತ್ರೆ), 8-10ನೆ ತರಗತಿ (ರಾಷ್ಟ್ರೀಯ ನಾಯಕರ ಭಾವ ಚಿತ್ರ) ಹಾಗೂ ಸಾರ್ವಜನಿಕ(ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಪಾರ್ಲಿಮೆಂಟ್ ಹೌಸ್ ಅಥವಾ ವಿಧಾನಸೌಧ) ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಿರೂರು ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ರಮೇಶ್ ಕಿದಿಯೂರು, ಶೇಖರ್ ಕಲಾಪ್ರತಿಭಾ, ಪಿ.ಆರ್.ಭಟ್ ಉಪಸ್ಥಿತರಿದ್ದರು.