×
Ad

ಜಮೀಯತುಲ್ ಫಲಾಹ್ ವತಿಯಿಂದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

Update: 2016-03-03 22:17 IST

   ಮಂಗಳೂರು,ಮಾ.3: ಮಂಗಳೂರು ನಗರ ಜಮೀಯತುಲ್ ಫಲಾಹ್ ಘಟಕ ವತಿಯಿಂದ ಕೇಂದ್ರ ಸರಕಾರ ನಡೆಸುವ ಸರಕಾರಿ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಒಂದು ದಿನದ ಮಾಹಿತಿ ಕಾರ್ಯಕ್ರಮ ಕಂಕನಾಡಿ ಜಮೀಯ್ಯತ್ತುಲ್ ಫಲಾಹ್ ಕಮ್ಯೂನಿಟಿ ಹಾಲ್‌ನಲ್ಲಿ ಮಾ.6 ರಂದು ಬೆಳಗ್ಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ.ಸರ್ಪ್ರಾಝ್ ಹಾಸಿಂ, ಪ್ರೊ. ಹಬೀಬುರ್ರಹ್ಮಾನ್ ಭಾಗವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಯಾಗಿರುವ ಪ್ರೊ. ನಬೀಲ್ ಅಹ್ಮದ್ ‘ಸರಕಾರಿ ಉದ್ಯೋಗಾವಕಾಶಕ್ಕೆ ತಯಾರಿ ಹಾಗೂ ಗುರಿ ಸಾಧನೆ ’ ಎಂಬ ವಿಷಯದ ಬಗ್ಗೆ ತರಬೇತಿ ನೀಡಲಿದ್ದಾರೆ.

  ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿರುವ ಅಬ್ದುಲ್ ನಝೀರ್, ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಕೈಝರ್ ಎಂ ಖಾನ್ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಈ ತರಬೇತಿ ಕಾರ್ಯಕ್ರಮಕ್ಕೆ ಪದವೀಧರ ಯುವಕ ಯುವತಿಯರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಜಮೀಯತ್ತುಲ್ ಫಲಾಹ್ ನಗರ ಘಟಕದ ಅಧ್ಯಕ್ಷರಾದ ಅಡ್ವಕೇಟ್ ಅಬ್ದುಲ್ ಅಝೀಝ್ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News