ಅದಾನಿ-ಯುಪಿಸಿಎಲ್ ವಿದ್ಯಾರ್ಥಿವೇತನ ವಿತರಣೆ
ಮೂಡುಬಿದಿರೆ, ಮಾ.3: ಅದಾನಿ ಫೌಂಡೇಶನ್ ಮತ್ತು ಉಡುಪಿ ಪವರ್ ಕಾರ್ಪೊರೇಶನ್ ಕಂಪೆನಿಯ ವತಿಯಿಂದ ಮೂಡುಬಿದಿರೆಯ ರೋಟರಿ ಆಂಗ್ಲಮಾಧ್ಯಮ ಶಾಲೆಯ 6ರಿಂದ 10ನೆ ತರಗತಿಯವರೆಗಿನ ಪ್ರತಿಭಾನ್ವಿತ 18 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಇತ್ತೀಚೆಗೆ ವಿತರಿಸಲಾಯಿತು. ಮೂಡುಬಿದಿರೆಯ ರೋಟರಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಅಮರನಾಥ ಶೆಟ್ಟಿ ವಿದ್ಯಾರ್ಥಿ ವೇತನವನ್ನು ವಿತರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅದಾನಿ-ಯುಪಿಸಿಎಲ್ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಕಿಶೋರ್ ಆಳ್ವ ಮಾತನಾಡಿ, ಘಟಕದ ಸುತ್ತಮುತ್ತ ಇರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಲಿಯುತ್ತಿರುವ ಒಟ್ಟು 250 ಮಕ್ಕಳಿಗೆ ರೂ.6.50 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ ಎಂದರು. ಈ ಸಂಭರ್ ಶಾಲಾ ಮುಖ್ಯೋ ಪಾಧ್ಯಾಯ ವಿನ್ಸೆಂಟ್ ಡಿ’ಕೋಸ್ತಾ, ಅದಾನಿ ಫೌಂಡೇಶನ್‌ನ ವಿನೀತ್ ಅಂಚನ್, ಅನುದೀಪ್ ಪೂಜಾರಿ, ಸುಖೇಶ್ ಸುವರ್ಣ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಮಕ್ಕಳ ಪೋಷಕರು ಮತ್ತಿತರರು ಉಪಸ್ಥಿತರಿದ್ದರು.