×
Ad

ಕಾರ್ಕಳ: ಪದವಿ ಪ್ರದಾನ ಸಮ್ಮೇಳನ

Update: 2016-03-04 00:36 IST

ಕಾರ್ಕಳ, ಮಾ.3: ಕಾರ್ಕಳದ ಕಜೆಯಲ್ಲಿರುವ ಮದ್ರಸ ಜಾಮಿಯಾ ಕಾಶಿಫುಲ್ ಉಲೂಮ್ನಲ್ಲಿ ಪ್ರಸಕ್ತ ಸಾಲಿನಲ್ಲಿ ಕುರ್‌ಆನ್ ಕಂಠಪಾಠ ಮಾಡಿದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಹಝ್ರತ್ ಮೌಲಾನಾ ಸೈಯದ್ ಮುನವ್ವರ್ ಹುಸೈನ್‌ಸಾಹೇಬ್ ಅಲ್ ಖಾಸಿಮಿ ವಿಶೇಷ ಪ್ರವಚನ ನೀಡಿದರು.

 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೌಲಾನಾ ಮುಹಮ್ಮದ್ ಹಸನ್ ಸಾಹೇಬ್, ಕುರ್‌ಆನ್ ಮತ್ತು ಪ್ರಸಕ್ತ ಸಮಾಜ ವಿಷಯದ ಕುರಿತು ಮಾತನಾಡಿದರು.

ಉಡುಪಿ ಜಿಲ್ಲಾ ವಕ್ಫ್ ಬೋರ್ಡ್‌ನ ಅಧ್ಯಕ್ಷ ಮುಹಮ್ಮದ್ ಯಹ್ಯಾ, ಇಮ್ತಿಯಾಝ್ ಅಹ್ಮದ್, ಕಾರ್ಕಳ ಜಾಮಿಯಾ ಮಸೀದಿ ಇಮಾಮ್ ಮೌಲಾನಾ ಝಹೀರ್ ಅಹ್ಮದ್ ಅಲ್ ಕಾಸಿಮಿ, ಮದ್ರಸ ಕಾಶಿಫುಲ್ ಉಲೂಮ್‌ನ ಕೋಶಾಧಿಕಾರಿ ರೇಂಜರ್ ಇಸ್ಮಾಯೀಲ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಅಶ್ಫಾಕ್ ಅಹ್ಮದ್, ಮೌಲಾನಾ ಜಾಫರ್ ಸಾಹೇಬ್ ಅಲ್ ಕಾಸಿಮಿ, ಇಂಜಿನಿಯರ್ ನಾಸಿರ್ ಬೈಲೂರು, ಪತ್ತೊಂಜಿಕಟ್ಟೆ ಮಸೀದಿಯ ಇಮಾಮ್ ಹಝ್ರತ್ ರಿಝ್ವೆನ್ ಸಾಹೇಬ್ ಉಪಸ್ಥಿತರಿದ್ದರು. ಹಾಫಿಝ್ಗಳಾದ ಎಲ್ಲಾ ಮಕ್ಕಳಿಗೆ ಪೇಟಾವನ್ನು ತೊಡಿಸಿ, ಪ್ರಶಸ್ತಿ ಹಾಗೂ ಬಹುಮಾನವನ್ನು ನೀಡಿ ಸತ್ಕರಿಸಲಾಯಿತು.

  ಮದ್ರಸದ ಪ್ರಾಂಶುಪಾಲ ಮೌಲಾನಾ ಮುಹಮ್ಮದ್ ಉಮರ್ ಅಲ್ ಕಾಸಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿ ಸ್ವಾಗತಿಸಿದರು. ಮೌಲಾನಾ ಶಾಹ್ ನವಾಝ್ ಅಲ್ ಕಾಸಿಮಿ ತರಾನ ವಾಚಿಸಿದರು. ಮೌಲಾನಾ ಮುಫ್ತಿ ಮುಹಮ್ಮದ್ ಅಸ್ಹಲ್ ರಬ್ಬಾನಿ ಅಲ್ ಕಾಸಿಮಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News